ಕುಕ್ಕಾಜೆ: ಅನುಸ್ಮರಣಾ ಸಮ್ಮೇಳನ
ಬಂಟ್ವಾಳ, ಡಿ. 26: ಎಸ್.ಎಸ್.ಎಫ್, ಎಸ್.ವೈ.ಎಸ್, ಹಾಗೂ ಎಸ್.ಎಸ್.ಎಫ್ ಕ್ಯಾಂಪಸ್ ಕುಕ್ಕಾಜೆ ವತಿಯಿಂದ ಕುಕ್ಕಾಜೆ ಜಂಕ್ಷನ್ ನಲ್ಲಿ ಮರ್ಹೂಂ ಮುಹಮ್ಮದ್ ಖೈಸ್ ವೇದಿಕೆಯಲ್ಲಿ ಬದ್ರ್ ಮೌಲಿದ್ ವಾರ್ಷಿಕ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ, ಪೊಸೋಟ್ ತಂಙಳ್ ಅನುಸ್ಮರಣಾ ಮಹಾ ಸಮ್ಮೇಳನ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚೆಟ್ಟೆಕಲ್ ವಹಿಸಿದರು. ಅಧ್ಯಕ್ಷತೆಯನ್ನು ಮಂಚಿ ಉಸ್ತಾದ್ ವಹಿಸಿದರು. ಉದ್ಘಾಟನೆಯನ್ನು ಸಿ.ಎಚ್.ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯಾ ವಹಿಸಿದರು. ಕಾಸರಗೋಡು ಟೌನ್ ಜುಮಾ ಮಸೀದಿ ಖತೀಬರಾದ ಅಬ್ದುಲ್ ಖಾದಿರ್ ಸಖಾಫಿ ಕಾಟಿಪ್ಪಾರ ಮುಖ್ಯಪ್ರಭಾಷಣ ಮಾಡಿದರು.
ಮುಖ್ಯ ಅಥಿತಿಗಳಾಗಿ ಎಸ್.ವೈ.ಎಸ್. ಬಂಟ್ವಾಳ ಡಿವಿಜನ್ ಅಧ್ಯಕ್ಷ ಅಬೂಬಕರ್ ಸಖಾಫಿ ಎಣ್ಮೂರು, ದಮಾಮ್ ಕೆ.ಎಸ್.ಎ. ಖಾದಿಮುಲ್ ಮರ್ಕಝ್ ಎಸ್.ಕೆ.ಹಸನ್ ಮುಸ್ಲಿಯಾರ್, ಎಸ್.ಜೆ.ಎಂ ಸುರಿಬೈಲು ರೇಂಜ್ ಅಧ್ಯಕ್ಷ ಸಾಲಿಂ ಸಅದಿ, ದಾವಣಗೆರೆ ದಾರುಲ್ ಉಲೂಂ ಬಿ.ಎ.ಇಬ್ರಾಹಿಂ ಸಖಾಫಿ, ಎಸ್ ಎಸ್ ಎಫ್ ಮಂಚಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ಲತೀಫ್ ಸಅದಿ, ಕುಕ್ಕಾಜೆ ಎಸ್ ವೈ ಎಸ್ ಅಧ್ಯಕ್ಷ ಮೊಯಿದಿನ್ ಕುಂಞಿ ನಾಡಾಜೆ, ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಮುಸ್ಲಿಯಾರ್, ಕೋಶಾಧಿಕಾರಿ ಟಿ.ಅಬೂಬಕರ್, ಕೆ.ಎಂ. ಅಬ್ದುಲ್ಲ ಮುಸ್ಲಿಯಾರ್ ಕುಕ್ಕಾಜೆ, ಅಬ್ಬಾಸ್ ಮುಸ್ಲಿಯಾರ್ ಕುಕ್ಕಾಜೆ, ಮಹ್ಮೂದ್ ಸಅದಿ ಕುಕ್ಕಾಜೆ ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಕೆ.ಯಂ.ಮುಹಮ್ಮದ್ ಶರೀಫ್, ಕೋಶಾಧಿಕಾರಿ ಬಶೀರ್ ಕಾಪಿಕಾಡ್, ಇರಾ ಗ್ರಾಮ ಪಂಚಾಯತ್ ಅದ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮಂಚಿ ಗ್ರಾಮ ಪಂಚಾಯತ್ ಸದಸ್ಯ ಜಿ.ಎಂ. ಇಬ್ರಾಹಿಂ, ಸಮೀಉಲ್ಲಾ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಕುಕ್ಕಾಜೆ ಶಾಖೆ ಅಧ್ಯಕ್ಷ ಹಂಝ ಸಖಾಫಿ ಅಲ್ ಅಝ್ಹರಿ ಸ್ವಾಗತಿಸಿ ಎಸ್.ಎಸ್.ಎಫ್ ಕ್ಯಾಂಪಸ್ ಕಾರ್ಯದರ್ಶಿ ಲುಕ್ಮಾನುಲ್ ಹಕೀಂ ವಂದಿಸಿದರು.