‘ವಿದೇಶಿ ಉಡುಪು ಧರಿಸಬೇಡಿ, ಮದ್ಯಪಾನ ಮಾಡಬೇಡಿ’
Update: 2017-12-26 20:57 IST
ಹೊಸದಿಲ್ಲಿ, ಡಿ. 26: ಪಶ್ಚಿಮದ ಉಡುಪುಗಳು ವಿದೇಶಿಗಳು ಹೇರಿದ ಗುಲಾಮಿತನ. ಇದು ಭಾರತದ ಪರಿಸರಕ್ಕೆ ಹೊಂದಿಕೆಯಾಗುವುದಿಲ್ಲ. ಆದುದರಿಂದ ಬಿಜೆಪಿ ಸದಸ್ಯರು ಇದರಿಂದ ದೂರವಿರಬೇಕು ಎಂದು ರಾಜ್ಯ ಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮಂಗಳವಾರ ಹೇಳಿದ್ದಾರೆ.
ಬಿಜೆಪಿಯಲ್ಲಿ ಶಿಸ್ತು ಜಾರಿಗೊಳಿಸಲು ಹಾಗೂ ಸುಧಾರಿಸಲು ಸುಬ್ರಹ್ಮಣ್ಯ ಸ್ವಾಮಿ ಟ್ವಿಟ್ಟರ್‌ನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಶ್ಚಿಮದ ಉಡುಪುಗಳು ವಿದೇಶಿಯರ ಗುಲಾಮಿತನದ ಹೇರಿಕೆ. ಸಚಿವರು ಭಾರತದ ಪರಿಸರ ಸ್ನೇಹಿ ಉಡುಪುಗಳನ್ನು ಧರಿಸುವ ಮೂಲಕ ಶಿಸ್ತು ಅನುಸರಿಸುವಂತೆ ಬಿಜೆಪಿ ಕ್ರಮ ಕೈಗೊಳ್ಳಬೇಕು ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪಕ್ಷದ ಸದಸ್ಯರು ಮಧ್ಯಪಾನ ಮಾಡಬಾರದು ಎಂದು ಕೂಡ ಸುಬ್ರಹ್ಮಣೀಯಂ ಸ್ವಾಮಿ ಹೇಳಿದ್ದಾರೆ.