×
Ad

ಅಕ್ರಮ ಗಾಂಜಾ ವಶ: ಇಬ್ಬರ ಬಂಧನ

Update: 2017-12-26 21:47 IST

ಉಡುಪಿ, ಡಿ.26: ಕುಂಜಿಬೆಟ್ಟಿನ ಲಾಲಾಲಜಪಾತ ರಾಯ್ ರಸ್ತೆಯ ಸುಬ್ರಹ್ಮಣ್ಯ ರೆಸಿಡೆನ್ಸಿಯ ಪ್ಲಾಟ್‌ನಲ್ಲಿ ಮತ್ತು ಅಲ್ಲಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಆ್ಯಕ್ಟಿವ್ ಹೋಂಡಾದಲ್ಲಿ ಅಕ್ರಮವಾಗಿ ಗಾಂಜಾ ದಾಸ್ತಾನು ಹೊಂದಿದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಉಮಾನಾಥ (19) ಹಾಗೂ ಶರತ್(19) ಬಂಧಿತ ಆರೋಪಿಗಳು. ಇವರಿಂದ 5,000 ರೂ. ಮೌಲ್ಯದ 90 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಡೆಪ್ಯುಟಿ ಕಮೀಷನರ್ ಕೆ.ಬಿ.ಮೇರು ನಂದನ್ ಹಾಗೂ ಉಡುಪಿ ಉಪ ವಿಭಾಗದ ಅಬಕಾರಿ ಉಪಾಧೀಕ್ಷಕ ವಿನೋದ್ ಕುಮಾರ್ ನಿರ್ದೇಶನದಂತೆ ಅಬಕಾರಿ ಉಪ ನಿರೀಕ್ಷಕ ನಿತ್ಯಾನಂದ, ಹಾಗೂ ಅಬಕಾರಿ ರಕ್ಷಕ ಮುನಾಫ್ ಸಾಹೇಬ್, ಗೃಹರಕ್ಷಕ ಗಣೇಶ್, ಹಿರಿಯ ವಾಹನ ಚಾಲಕ ವೆಂಕಟರಮಣ ಗೊಲ್ಲ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News