2018ರಲ್ಲಿ ಬ್ರಿಟನ್, ಫ್ರಾನ್ಸನ್ನು ಹಿಂದಿಕ್ಕಲಿದೆ ಭಾರತದ ಆರ್ಥಿಕತೆ

Update: 2017-12-26 16:26 GMT

ಲಂಡನ್, ಡಿ. 26: ಭಾರತ ಬ್ರಿಟನ್ ಮತ್ತು ಫ್ರಾನ್ಸ್‌ನ್ನು ಹಿಂದಿಕ್ಕಿ 2018ರಲ್ಲಿ ಅಮೆರಿಕದ ಡಾಲರ್ ಆಧಾರದಲ್ಲಿ ಜಗತ್ತಿನ ಐದನೆ ಅತಿ ದೊಡ್ಡ ಆರ್ಥಿಕತೆಯಾಗುತ್ತದೆ ಎಂದು ಬ್ರಿಟನ್‌ನಲ್ಲಿರುವ ಹಣಕಾಸು ಸಲಹಾ ಸಂಸ್ಥೆಯೊಂದು ಮಂಗಳವಾರ ಹೇಳಿದೆ.

ಮುಂದಿನ 15 ವರ್ಷಗಳ ಅವಧಿಯಲ್ಲಿ ಅಗ್ರ 10 ಆರ್ಥಿಕತೆಗಳ ಪಟ್ಟಿಯಲ್ಲಿ ಏಶ್ಯದ ದೇಶಗಳೇ ಮೇಲುಗೈ ಸಾಧಿಸುತ್ತವೆ ಎಂದು ಸೆಂಟರ್ ಫಾರ್ ಎಕನಾಮಿಕ್ಸ್ ಆ್ಯಂಡ್ ಬಿಸ್ನೆಸ್ ರಿಸರ್ಚ್‌ನ ‘2018 ವರ್ಲ್ಡ್ ಎಕನಾಮಿಕ್ ಲೀಗ್ ಟೇಬಲ್’ ಹೇಳುತ್ತದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

‘‘ತಾತ್ಕಾಲಿಕ ಹಿನ್ನಡೆಗಳ ಹೊರತಾಗಿಯೂ, ಭಾರತದ ಆರ್ಥಿಕತೆಯು ಫ್ರಾನ್ಸ್ ಮತ್ತು ಬ್ರಿಟನ್‌ಗಳ ಆರ್ಥಿಕತೆಯನ್ನು ಸರಿಗಟ್ಟಿದೆ ಹಾಗೂ 2018ರಲ್ಲಿ ಅದು ಈ ಎರಡೂ ದೇಶಗಳನ್ನು ಹಿಂದಿಕ್ಕಿ ಡಾಲರ್‌ನ ಆಧಾರದಲ್ಲಿ ಜಗತ್ತಿನ ಐದನೆ ಅತಿ ದೊಡ್ಡ ಆರ್ಥಿಕತೆಯಾಗುತ್ತದೆ’’ ಎಂದು ರಿಸರ್ಚ್‌ನ ಕಾರ್ಯಕಾರಿ ಉಪನಿರ್ದೇಶಕ ಡಗ್ಲಸ್ ಮೆಕ್‌ವಿಲಿಯಮ್ಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News