ಮಣಿಪಾಲ; ಬೈಕಿನಿಂದ ಬಿದ್ದು ಹಸುಗೂಸು ಮೃತ್ಯು: ತಾಯಿಗೆ ಗಾಯ
ಮಣಿಪಾಲ, ಡಿ.26: ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಮಗು ತಾಯಿಯೊಂದಿಗೆ ಬೈಕಿನಿಂದ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಡಿ.25ರಂದು ಸಂಜೆ 5.30ರ ಸುಮಾರಿಗೆ ಮಣಿಪಾಲ ಶಾಂತಿನಗರದ ವಾಗ್ಲೆ ಸ್ಟೋರ್ ಎಂಬಲ್ಲಿ ನಡೆದಿದೆ.
80 ಬಡಗುಬೆಟ್ಟು ಶಾಂತಿನಗರದ ಈರಮ್ಮ ಎಂಬವರ 6 ತಿಂಗಳ ಗಂಡು ಮಗು ಸಂದೀಪ ಮೃತ ದುದೈರ್ವಿ. ವಿಪರೀತ ಜ್ವರದಿಂದ ಬಳಲುತ್ತಿದ್ದ ಮಗು ವನ್ನು ಚಿಕಿತ್ಸೆಗಾಗಿ ಮಣಿಪಾಲದ ವೇಣುಗೋಪಾಲ ದೇವಸ್ಥಾನದ ಬಳಿಯ ಸರಕಾರಿ ಆಸ್ಪತ್ರೆಗೆ ಈರಮ್ಮ ಅವರ ಸಂಬಂಧಿ ವಿರೇಶ್ ಎಂಬವರ ಬೈಕಿನಲ್ಲಿ ಕರೆದು ಕೊಂಡು ಹೋಗುತ್ತಿದ್ದರು.
ವಿರೇಶ್ ಬೈಕ್‌ನ್ನು ಅತಿವೇಗದಿಂದ ಚಲಾಯಿಸಿಕೊಂಡು ಹೋದ ಪರಿಣಾಮ ಹಿಂಬದಿಯಲ್ಲಿದ್ದ ತಾಯಿ ಮತ್ತು ಮಗು ರಸ್ತೆಗೆ ಬಿದ್ದು ಗಾಯ ಗೊಂಡರು. ಕೂಡಲೇ ತಾಯಿ ಮಗುವನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.