ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2017-12-26 22:00 IST
ಪಡುಬಿದ್ರೆ, ಡಿ.26: ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪಾದೆ ಬೆಟ್ಟು ಗ್ರಾಮದ ಕಿಟ್ಟ ಪೂಜಾರಿ (78) ಎಂಬವರು ಡಿ.25ರಂದು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ನ.28ರಂದು ರಾತ್ರಿ ವಿಷ್ಣುಮೂರ್ತಿ ನಗರ, ಕೆಳಾರ್ಕಳಬೆಟ್ಟು ಎಂಬಲ್ಲಿರುವ ಮನೆಯಿಂದ ನಾಪತ್ತೆಯಾಗಿದ್ದ ಅಚ್ಯುತ್ ಆಚಾರ್ಯ (65) ಎಂಬವರ ಮೃತದೇಹವು ಡಿ. 26ರಂದು ಬೆಳಗ್ಗೆ 10ಗಂಟೆಗೆ ವಾರಂಬಳ್ಳಿ ಗ್ರಾಮದ ದೂಪದಕಟ್ಟೆ ಬಳಿಯ ಹಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.