ಕೆರೆಗೆ ಬಿದ್ದು ಮಹಿಳೆ ಮೃತ್ಯು
Update: 2017-12-26 22:01 IST
ಶಿರ್ವ, ಡಿ.26: ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಡಿ. 26 ರಂದು ಬೆಳಗಿನ ಜಾವ ಪಣಿಯೂರು ಎಂಬಲ್ಲಿ ನಡೆದಿದೆ.
ಮೃತರನ್ನು ಪಣಿಯೂರಿನ ನಾರಾಯಣ ತಂತ್ರಿ ಎಂಬವರ ಪತ್ನಿ ಸುಧಾ ತಂತ್ರಿ(64) ಎಂದು ಗುರುತಿಸಲಾಗಿದೆ.
ಇವರು ಮನೆಯ ಬಳಿಯ ತೋಟ ದಲ್ಲಿ ಅಡಿಕೆ ಹೆಕ್ಕಲು ಹೋಗಿದ್ದರು. ಆಗ ತೋಟದಲ್ಲಿರುವ ಕೆರೆಗೆ ಕೈಕಾಲು ಮುಖ ತೊಳೆಲು ಇಳಿದ ಅವರು ಆಕಸ್ಮಿಕವಾಗಿ ಜಾರಿ ಕೆರೆಗೆ ಬಿದ್ದು ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.