×
Ad

ಕುಂದಾಪುರ: ಗ್ರಾಪಂ ಅಧ್ಯಕ್ಷೆಗೆ ಅವಮಾನ: ದೂರು

Update: 2017-12-26 22:05 IST

ಕುಂದಾಪುರ, ಡಿ. 26: ಪಡಿತರ ಚೀಟಿಯ ವಿಚಾರದಲ್ಲಿ ಗ್ರಾಪಂ ಅಧ್ಯಕ್ಷೆ ಸುಪ್ರೀತ(30) ಎಂಬವರಿಗೆ ಬೈದು ಅವಮಾನ ಮಾಡಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ. 26ರಂದು ಬೆಳಗ್ಗೆ 10:15ರ ಸುಮಾರಿಗೆ ಗ್ರಾಪಂ ಕಚೇರಿಗೆ ಬಂದ ಗುಲ್ವಾಡಿಯ ವಿಶ್ವನಾಥ ಶೆಟ್ಟಿ ಎಂಬವರು ಅಧ್ಯಕ್ಷರಲ್ಲಿ ಹೊಸದಾಗಿ ಮಾಡಿಸಿದ ಪಡಿತರ ಚೀಟಿ ಬಗ್ಗೆ ವಿಚಾರಿಸಿ ಅವಾಚ್ಯ ಶಬ್ದಗಳಿಂದ ಬೈದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News