×
Ad

ಜಯಲಲಿತಾ ಸೊಸೆ ಪಕ್ಷದ ಕಚೇರಿಗೆ ಕಲ್ಲೆಸೆತ

Update: 2017-12-26 22:18 IST

ಚೆನ್ನೈ, ಡಿ. 26: ದಿವಂಗತ  ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸೊಸೆ ಜೆ. ದೀಪಾ ಅವರ ಪಕ್ಷದ ಕಚೇರಿಗೆ ಮಂಗಳವಾರ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಇಲ್ಲಿನ ಆರ್.ಟಿ. ನಗರದಲ್ಲಿರುವ ತನ್ನ ಎಂಜಿಆರ್ ಅಮ್ಮಾ ದೀಪಾ ಪೇರವೈ ಕಚೇರಿಗೆ ಅಪರಾಹ್ನ 12:30ರ ಹೊತ್ತಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ದೀಪಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಕಚೇರಿಯ ಕೆಲವು ಕಿಟಕಿಗಳ ಗಾಜು ಒಡೆದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಪರಿಚಯದ ವ್ಯಕ್ತಿಗಳು ಇರುವ ಸಾಧ್ಯತೆ ಇದೆ ಎಂದು ದೀಪಾ ಸಂಶಯ ವ್ಯಕ್ತಪಡಿಸಿದ್ದಾರೆ.

ಮಾಂಬಲಂ ಪೊಲೀಸ್ ಠಾಣೆಯಲ್ಲಿ ದೀಪಾ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News