ಕುಂದಾಪುರ: ಉರೂಸ್ ಸಮಾರೋಪ
Update: 2017-12-26 22:42 IST
ಕುಂದಾಪುರ, ಡಿ. 26: ಹಝ್ರತ್ ಸೈಯದ್ ಯೂಸುಫ್ ವಲಿಯುಲ್ಲಾಹಿ (ರ) ರವರ ಹೆಸರಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಮಂಗಳವಾರ ವಿಜ್ರಂಭಣೆಯೊಂದಿಗೆ ಸಮಾಪನೆಗೊಂಡಿತು.
ಉರೂಸಿನ ಭಾಗವಾಗಿ ಧಾರ್ಮಿಕ ವಿದ್ವಾಂಸರಿಂದ ಮತ ಪ್ರವಚನ, ನಅತ್, ಕೂಟು ಪ್ರಾರ್ಥನೆ, ಖುರ್ಆನ್ ಪಾರಾಯಣ ಕಾರ್ಯಕ್ರಮಗಳು ನಡೆಯಿತು.
ಕೊನೆಯಲ್ಲಿ ದಫ್ಫ್ ದಾಯಿರದೊಂದಿಗೆ ಸಂದಲ್ ಮೆರವಣಿಗೆ ನಡೆದ ಬಳಿಕ ಅನ್ನದಾನ ವಿತರಣೆ ನಡೆಯಿತು.