×
Ad

ಸಿರಿಯ: ರಶ್ಯ ಪ್ರಾಯೋಜಿತ ಸಭೆ ತಿರಸ್ಕರಿಸಿದ ಬಂಡುಕೋರರು

Update: 2017-12-26 23:18 IST

ಬೀಜಿಂಗ್, ಡಿ. 26: ಸಿರಿಯಕ್ಕೆ ಸಂಬಂಧಿಸಿ ಸೋಚಿಯಲ್ಲಿ ರಶ್ಯ ನಡೆಸಲು ಉದ್ದೇಶಿಸಿರುವ ಸಭೆಯನ್ನು ಸಿರಿಯದ ಬಂಡುಕೋರ ಗುಂಪುಗಳು ಸೋಮವಾರ ತಿರಸ್ಕರಿಸಿವೆ.

ವಿಶ್ವಸಂಸ್ಥೆ ಬೆಂಬಲಿತ ಜಿನೇವ ಶಾಂತಿ ಮಾತುಕತೆಗಳನ್ನು ಉಪೇಕ್ಷಿಸಲು ಮಾಸ್ಕೊ ಪ್ರಯತ್ನಿಸುತ್ತಿದೆ ಹಾಗೂ ಅದು ಯುದ್ಧಪೀಡಿತ ದೇಶದಲ್ಲಿ ಯುದ್ಧಾಪರಾಧಗಳನ್ನು ನಡೆಸುತ್ತಿದೆ ಎಂದು ಈ ಗುಂಪುಗಳು ಆರೋಪಿಸಿವೆ.

ರಾಜಕೀಯ ಇತ್ಯರ್ಥಕ್ಕೆ ಬರುವಂತೆ ರಶ್ಯ ಸಿರಿಯ ಸರಕಾರದ ಮೇಲೆ ಒತ್ತಡವನ್ನು ಹೇರಿಲ್ಲ ಎಂಬುದಾಗಿ 40 ಬಂಡುಕೋರ ಗುಂಪುಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News