×
Ad

ಸಾಧನೆಗೆ ಕಠಿಣ ಪರಿಶ್ರಮ ಅತ್ಯಗತ್ಯ - ಸಹನಾ ಕುಮಾರಿ

Update: 2017-12-27 19:32 IST

ಪಕ್ಕಲಡ್ಕ, ಡಿ. 27: ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ಇದರ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ್ದ ಸ್ಪೋಟ್ಸ್ ಕ್ಲಬ್ ಇದರ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ಹೈಜಂಪ್ ವಿಭಾಗದ ಅಂತಾರಾಷ್ಟೀಯ ಮಟ್ಟದ ಆಟಗಾರ್ತಿ ಮತ್ತು ಮಂಗಳೂರಿನವರೇ ಆಗಿರುವ ಸಹನಾ ಕುಮಾರಿಯವರ ನಿವಾಸಕ್ಕೆ ಭೇಟಿ ಕೊಟ್ಟು ವಿದ್ಯಾರ್ಥಿಗಳು ಸಮಾಲೋಚಿಸಿ, ನಂತರ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಂತರ ಮಾತನಾಡಿದ ಅವರು ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ ವಿದ್ಯಾರ್ಥಿಗಳು ಸಾಧನೆಯ ಮೂಲಕ ರಾಜ್ಯಕ್ಕೆ, ದೇಶಕ್ಕೆ ಕೊಡುಗೆ ನೀಡುವವರಾಗಬೇಕು. ಮೊದಲನೆಯದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಸಮಯ್ಯಕ್ಕೆ ಸರಿಯಾಗಿ ಊಟ ಮಾಡಬೇಕು, ಆತ್ಮ ವಿಶ್ವಾಸವನ್ನು ಬೆಳೆಸಬೇಕು ಎಂದರು.

ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಯೂಸುಫ್ ಪಕ್ಕಲಡ್ಕ, ದೈಹಿಕ ಶಿಕ್ಷಕಿ ರೋಹಿಣಿ, ಅಧ್ಯಾಪಕರಾದ ಆಶಿರುದ್ದೀನ್ ಆಲಿಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News