ಡಿ.30: ವಿಚಾರ ಗೋಷ್ಠಿ ಹಾಗೂ ಸಂವಾದ
Update: 2017-12-27 19:52 IST
ಮಂಗಳೂರು, ಡಿ.27: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ತುಳುಭವನದ ‘ಸಿರಿಚಾವಡಿ’ಯಲ್ಲಿ ಡಿ.30ರಂದು ಅಪರಾಹ್ನ 3ಗಂಟೆಗೆ ‘ತುಳು ತಲೆ ಎತ್ತುವ ಬಗೆ’ ಮತ್ತು ’ತುಳು ಸಂಸ್ಕೃತಿ ಆಚರಣೆಯ ಸ್ವರೂಪ’ ಎಂಬ ವಿಚಾರಗಳ ಬಗ್ಗೆ ‘ವಿಚಾರ ಗೋಷ್ಠಿ ಹಾಗೂ ಸಂವಾದ’ ಕಾರ್ಯಕ್ರಮ ನಡೆಯಲಿದೆ.
ಪ್ರಾಧ್ಯಾಪಕರಾದ ಪ್ರೊ.ಅಭಯ ಕುಮಾರ್ ‘ತುಳು ತಲೆ ಎತ್ತುವ ಬಗೆ’ ಹಾಗೂ ಡಾ. ಪೂವಪ್ಪಕಣಿಯೂರು ‘ತುಳು ಸಂಸ್ಕೃತಿ ಆಚರಣೆಯ ಸ್ವರೂಪ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿರುವರು ಎಂದು ಪ್ರಕಟನೆ ತಿಳಿಸಿದೆ.