×
Ad

ಡಿ.28ರಿಂದ ಕದ್ರಿ ಪಾರ್ಕ್‌ನಲ್ಲಿ ಯುವ ಉತ್ಸವ

Update: 2017-12-27 19:55 IST

ಮಂಗಳೂರು, ಡಿ.27: ದ.ಕ. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ನಡೆಯುವ ಕರಾವಳಿ ಉತ್ಸವದ ಅಂಗವಾಗಿ ಡಿ.28, 29ರಂದು ದ.ಕ. ಜಿಲ್ಲಾ ಯುವ ಉತ್ಸವವು ಕದ್ರಿ ಪಾರ್ಕ್‌ನ ತೆರೆದ ರಂಗಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಪಟ್ಲ ಸತೀಶ್ ಶೆಟ್ಟಿ, ಚಿತ್ರನಟ ಪೃಥ್ವಿ ಭಾಗವಹಿಸಲಿದ್ದಾರೆ.

 ಸ್ಪರ್ಧೆಯಲ್ಲಿ ಅತ್ಯುತ್ತಮ ಕರಾವಳಿ ಕಾಲೇಜು, ಪ್ರಥಮ, ದ್ವಿತೀಯ, ತೃತೀಯ, ಹಾಗೂ ಅತ್ಯುತ್ತಮ ಕರಾವಳಿ ಯುವಕ ಮತ್ತು ಯುವತಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಜೇತರಿಗೆ ಮತ್ತು ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಯುವ ಉತ್ಸವನ್ನು ನಿರ್ವಹಿಸಲು ಕಾರ್‌ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ನೋಡಲ್ ಕಾಲೇಜ್ ಆಗಿ ಗುರುತಿಸಲಾಗಿದ್ದು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಶೇಷಪ್ಪಹಾಗೂ ಡಾ.ನಾಗವೇಣಿ ಮಂಚಿ ಸಂಚಾಲಕರಾಗಿರುತ್ತಾರೆ.

ಕರಾವಳಿ ಉತ್ಸವ ಸಮಿತಿಯ ಅಧ್ಯಕ್ಷೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ., ಕಾರ್ಯಧ್ಯಕ್ಷ ಹಾಗೂ ರಥಬೀದಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಪ್ರಮಾಣ ಪತ್ರಗಳನ್ನು ನೀಡಲಿದ್ದಾರೆ ಎಂದು ಕರಾವಳಿ ಯುವ ಉತ್ಸವ ಸಮಿತಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News