×
Ad

ಡಿ. 28ರಿಂದ ಕರಕುಶಲ ವಸ್ತುಗಳ ಪ್ರದರ್ಶನ

Update: 2017-12-27 20:02 IST

ಮಂಗಳೂರು, ಡಿ.27: ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ವತಿಯಿಂದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಡಿ.28ರಂದು ಸಂಜೆ 5:45ಕ್ಕೆ ನಗರದ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಆರಂಭವಾಗಲಿದೆ.

 ಸೊಗಸಾದ ವರ್ಣಚಿತ್ರಗಳು, ಜವಳಿ ವಸ್ತುಗಳು, ಆಭರಣ ಹಾಗೂ ಇನ್ನಿತರ ಕರಕುಶಲಾದಿ ವಸ್ತುಗಳು ಈ ಮೇಳದಲ್ಲಿ ಪ್ರದರ್ಶಿಸಲ್ಪಡುತ್ತದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ ರಾಕ್‌ವಿರ್ ಪ್ರತಾಪ್ ಶರ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News