ಡಿ. 28: ಕೋಟೇಶ್ವರದಲ್ಲಿ ಉದ್ಯೋಗ ಮೇಳ
Update: 2017-12-27 21:47 IST
ಉಡುಪಿ, ಡಿ.27: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಡಿ. 28ರಂದು ಕುಂದಾಪುರ ತಾಲೂಕಿನ ಕೋಟೇಶ್ವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ವಿವಿಧ ಕಂಪೆನಿ/ಸಂಸ್ಥೆಗಳು ಭಾಗವಹಿಸಿ ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ.
ಉದ್ಯೋಗಾಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳಲಿರುವುದರಿಂದ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಆಸಕ್ತಿ ಇರುವ ಎಸೆಸೆಲ್ಸಿ/ಪಿಯುಸಿ/ಯಾವುದೇ ಪದವಿ/ಡಿಪ್ಲೋಮ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ವಿದ್ಯಾರ್ಹತೆ ಅಂಕಪಟ್ಟಿ/ರೆಸ್ಯೂಮ್ (ಬಯೋಡೇಟಾ) ಇತ್ಯಾದಿ ದಾಖಲೆಗಳೊಂದಿಗೆ ಗುರುವಾರ ಬೆಳಗ್ಗೆ 9:30ಕ್ಕೆ ಕೋಟೇಶ್ವರ-ಹಾಲಾಡಿ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಹಾಜರಾಗುವಂತೆ ಉಡುಪಿ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.