‘ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ’ ಕೃತಿ ಬಿಡುಗಡೆ
ಮಂಗಳೂರು, ಡಿ.27: ಲೇಖಕ ಬಿ.ಕೆ. ಅಬ್ದುಲ್ ಸಲಾಮ್ ದೇರಳಕಟ್ಟೆ ಅನುವಾದಿಸಿದ ‘ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ’ ಎಂಬ ಕೃತಿಯನ್ನು ನಗರದ ಬದ್ರಿಯಾ ಪ.ಪೂ.ಕಾಲೇಜಿನಲ್ಲಿ ಮೆಲ್ಕಾರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಉತ್ತಮ ಕೃತಿಗಳನ್ನು ಓದುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು. ಬದ್ರಿಯಾ ಕಾಲೇಜಿನ ಅಧ್ಯಕ್ಷ ಪಿ.ಸಿ. ಹಾಶೀರ್ ಮಾತನಾಡಿ ವಿದ್ಯೆ-ವ್ಯಕ್ತಿತ್ವ- ಧರ್ಮ ಸಮ್ಮಿಲನವಾದರೆ ಒಳ್ಳೆಯ ಮನುಷ್ಯನಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಇಸ್ಮಾಯೀಲ್ ಪ್ರಥಮ ಪ್ರತಿ ಸ್ವೀಕರಿಸಿದರು. ಕೃತಿಯನ್ನು ಶಬೀನಾ ವೈ.ಕೆ. ಪರಿಚಯಿಸಿದರು. ಈ ಸಂದರ್ಭ ಹಾಜಿ ಎಸ್.ಎಂ. ರಶೀದ್ ಹಾಗೂ ಆಂಟಿ ಕ್ಯಾನ್ಸರ್ ಔಷಧದ ಕುರಿತು ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದ ಮುಬೀನ್ ಉಳ್ಳಾಲ ಅವರನ್ನು ಸನ್ಮಾನಿಸಲಾಯಿತು.
ಇರ್ಷಾದ್ ವೇಣೂರ್ ಕಿರಾಅತ್ ಪಠಿಸಿದರು. ಅಧ್ಯಾಪಕ ಯೂಸುಫ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಅಧ್ಯಾಪಕ ಹಂಝ, ಅನುಪಮ ಮಹಿಳಾ ಮಾಸಿಕದ ವ್ಯವಸ್ಥಾಪಕ ಮುಹ್ಸಿನ್ ಉಪಸ್ಥಿತರಿದ್ದರು.