ಕೆಮ್ತೂರು ತುಳು ನಾಟಕ ಪರ್ಬ: ‘ಸರ್ಪ ಸಂಪಿಗೆ’ ಪ್ರಥಮ

Update: 2017-12-28 12:13 GMT

ಉಡುಪಿ, ಡಿ.28: ಉಡುಪಿ ತುಳುಕೂಟ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ್ಣ ಬಯಲು ರಂಗ ಮಂಟಪದಲ್ಲಿ ಏಳು ದಿನಗಳ ಕಾಲ ನಡೆದ 16ನೆ ವರ್ಷದ ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ಕೆಮ್ತೂರು ತುಳು ನಾಟಕ ಪರ್ಬದಲ್ಲಿ ನೀರೆ ಬೈಲೂರು ರಂಗ ಸನ್ನಿಧಿ ತಂಡದ ‘ಸರ್ಪ ಸಂಪಿಗೆ’ ನಾಟಕವು 15 ಸಾವಿರ ರೂ. ನಗದು ಸಹಿತ ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿ ಗೆದ್ದುಕೊಂಡಿದೆ.

ಕೊಡವೂರು ನವಸುಮ ರಂಗಮಂಚ ತಂಡದ ‘ದುರ್ದುಂಡೆ ದ್ರೌಣಿ’ ನಾಟಕ 10ಸಾವಿರ ರೂ. ನಗದು ಸಹಿತ ದ್ವಿತೀಯ ಸ್ಥಾನ ಮತ್ತು ಪಟ್ಲ ಭೂಮಿ ಗೀತ ಸಾಂಸ್ಕೃತಿಕ ವೇದಿಕೆ ತಂಡದ ‘ಚಂದ್ರೆ ಎನ್ನೊಟ್ಟುಗುಲ್ಲೆ’ ನಾಟಕ 7ಸಾವಿರ ರೂ. ನಗದು ಸಹಿತ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

‘ಸರ್ಪ ಸಂಪಿಗೆ’ ನಾಟಕದ ನಿರ್ದೇಶಕ ಸುರೇಂದ್ರ ಮೋಹನ್ ಮುದ್ರಾಡಿ ಪ್ರಥಮ, ‘ದುರ್ದುಂಡೆ ದ್ರೌಣಿ’ ನಾಟಕದ ನಿರ್ದೇಶಕ ಬಾಲಕೃಷ್ಣ ಕೊಡವೂರು ದ್ವಿತೀಯ, ಮಲ್ಪೆ ಕರಾವಳಿ ಕಲಾವಿದರು ತಂಡದ ‘ಮಂತ್ರದೇವತೆ’ ನಾಟಕ ನಿರ್ದೇಶಕ ದಿನೇಶ್ ಆಚಾರ್ಯ ತೃತೀಯ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದರು.

ಶ್ರೇಷ್ಠ ರಂಗಪರಿಕರ/ಪ್ರಸಾಧನ: ಪ್ರ- ‘ಸರ್ಪ ಸಂಪಿಗೆ’, ದ್ವಿ- ದುರ್ದುಂಡೆ ದ್ರೌಣಿ, ತೃ- ಚಂದ್ರೆಎನ್ನೊಟ್ಟುಗುಲ್ಲೆ. ಶ್ರೇಷ್ಠ ಬೆಳಕು: ಪ್ರ-ದುರ್ದುಂಡೆ ದ್ರೌಣಿ ನಾಟಕದ ಜಯಶೇಖರ ಮಡೆಪ್ಪಾಡಿ, ದ್ವೀ- ಮಂತ್ರದೇವತೆ ನಾಟಕದ ನಿತೇಶ್ ಬಂಟ್ವಾಳ್, ತೃ- ಸರ್ಪಸಂಪಿಗೆ ನಾಟಕದ ರಾಜು ಮಣಿಪಾಲ. ಶ್ರೇಷ್ಠ ಸಂಗೀತ: ಪ್ರ- ಸರ್ಪಸಂಪಿಗೆ ನಾಟಕದ ಕೃಷ್ಣ ಕಾಮತ್, ದ್ವಿ- ಚಂದ್ರೆಎನ್ನೊಟ್ಟುಗುಲ್ಲೆ ನಾಟಕದ ದಿವಾಕರ್ ಕಟೀಲ್, ತೃ-ದುರ್ದುಂಡೆ ದ್ರೌಣಿ ನಾಟಕದ ಶರತ್ ಚಂದ್ರ.

ಶ್ರೇಷ್ಠ ನಟ: ಪ್ರ- ಸರ್ಪ ಸಂಪಿಗೆ ನಾಟಕದ ಪ್ರಜ್ವಲ್ ಪೂಜಾರಿ(ಕಾಳಿಂಗ), ದ್ವಿ-ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕದ ಸಂತೋಷ್ ನಾಯಕ್ ಪಟ್ಲ (ಬುಡಾನ್ ಸಾಬೆರ್), ತೃ- ದುರ್ದುಂಡೆ ದ್ರೌಣಿ ನಾಟಕದ ಬಾಲಕೃಷ್ಣ ಕೊಡವೂರು (ಅಶ್ವತ್ಥಾಮ). ಶ್ರೇಷ್ಠ ನಟಿ: ಪ್ರ-ದುರ್ದುಂಡೆ ದ್ರೌಣಿ ನಾಟಕದ ಪುಷ್ಪಲತಾ (ದ್ರೌಪದಿ), ದ್ವಿ- ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕದ ಸೌಮ್ಯ ಆಚಾರ್ಯ (ಮುನೀರ್‌ಜಾನ್), ತೃ-ಸರ್ಪ ಸಂಪಿಗೆ ನಾಟಕದ ಪವಿತ್ರ(ಸಿರಿಸಂಪಿಗೆ).

ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ಸಸಿಹಿತ್ಲು ರಂಗ ಸುದರ್ಶನ ತಂಡದ ‘ಒಂಜಿ ಸಿರಿ ರಡ್ಡ್ ಬೊಂಡ’ ನಾಟಕದ ಜಯ ಎಸ್.ಶೆಟ್ಟಿ ಪಡುಬಿದ್ರಿ(ಪಾಂಗು ಬನ್ನಾರ್), ‘ಮಂತ್ರದೇವತೆ’ ನಾಟಕದ ನೂತನ್ ಕುಮಾರ್(ಬೀರಣ್ಣ), ಉಡುಪಿ ಅಮಾಸ ಕಲಾತಂಡದ ‘ಬರ್ಬರೀಕ’ ನಾಟಕದ ಪ್ರವೀಣ್ ಆಚಾರ್ಯ ದೊಡ್ಡಣಗುಡ್ಡೆ(ಗೂರಾ), ಮಂಗಳೂರು ಗಂಜಿಮಠ ಬಂಗಾರ್ ಕಲಾವಿದೆರ್ ತಂಡದ ‘ಭಾಸ್ಕರೆ ಬಂಗೊಡುಲ್ಲೆ’ ನಾಟಕದ ದೀಕ್ಷಿತ್ ಪೊಳಲಿ(ಭಾಸ್ಕರೆ), ಸರ್ಪ ಸಂಪಿಗೆ ನಾಟಕದ ಚೇತನ್ ನೀರೆ(ರಾಜಕುಮಾರ), ದುರ್ದುಂಡೆದ್ರೌಣಿ ನಾಟಕದ ಕೆ.ರಾಜಗೋಪಾಲ್ ಶೇಟ್(ಕೃಪಾಚಾರ್ಯ), ಬರ್ಬರೀಕ ನಾಟಕದ ಶಶ್ಮಿತಾ ಎಸ್.ಕಾಪು(ಬುದ್ಧಿ), ಭಾಸ್ಕರೆ ಬಂಗೊಡುಲ್ಲೆ ನಾಟಕದ ಪ್ರತಿಮಾ ಆಚಾರ್ಯ(ನೇತ್ರ), ಮಂತ್ರ ದೇವತೆ ನಾಟಕದ ಅಶ್ವಿನಿ ಅಂಬಲಪಾಡಿ(ಮಂತ್ರದೇವತೆ), ಚಂದ್ರೆ ಎನ್ನೊಟ್ಟು ಗುಲ್ಲೆ ನಾಟಕದ ರಂಜಿತಾ (ಆರ್ಷಿಯಾ).

ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲ ನಟರು: ಬರ್ಬರೀಕ ನಾಟಕದ ಮಾಸ್ಟರ್ ರಾಹುಲ್ ಕೊರಂಗ್ರಪಾಡಿ(ಹುಡುಗ), ಸರ್ಪ ಸಂಪಿಗೆ ನಾಟಕದ ಮಾಸ್ಟರ್ ಗಗನ್ ಶೆಟ್ಟಿ(ಭಾಗವತ). ಉದಯೋನ್ಮುಖ ಪ್ರತಿಭೆ: ದೃಶಾ ಕೊಡಗು ಅವರಿಗೆ ಬರ್ಬರೀಕ ನಾಟಕದ ಹಿನ್ನೆಲೆ ಸಂಗೀತಕ್ಕಾಗಿ ವಿಶೇಷ ಮೆಚ್ಚುಗೆ ಪ್ರಶಸ್ತಿ.

ಸ್ಪರ್ಧೆಯ ತೀರ್ಪುಗಾರರಾಗಿ ರಂಗಕರ್ಮಿಗಳಾದ ಯಾದವ ವಿ.ಕರ್ಕೇರ, ಪ್ರಶಾಂತ್ ಶೆಟ್ಟಿ, ಅಶ್ವತ್ಥ್ ಭಾರದ್ವಾಜ್ ಸಹಕರಿಸಿದ್ದರು. ನಾಟಕ ಸ್ಫರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಜ.21ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. ಬಳಿಕ ಪ್ರಥಮ ಪ್ರಶಸ್ತಿ ವಿಜೇತ ನೀರೆಬೈಲೂರು ರಂಗಸನ್ನಿಧಿ ತಂಡದ ಸರ್ಪ ಸಂಪಿಗೆ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News