ಉಡುಪಿ: ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ
Update: 2017-12-28 19:41 IST
ಉಡುಪಿ, ಡಿ.28: ಉಡುಪಿ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ನಡೆಸುತ್ತಿರುವ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್ ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳಿಗೆ 2018-19ನೆ ಸಾಲಿನ 6ನೆ ತರಗತಿ ದಾಖಲಾತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳು ವಸತಿ ಶಾಲೆಗಳು, ಬಿಇಒ, ಸಮಾಜ ಕಲ್ಯಾಣ ಬಿಸಿಎಂ, ಐಟಿಡಿಪಿ ಇಲಾಖಾ ಕಚೇರಿಗಳಲ್ಲಿ ದೊರೆಯಲಿದೆ. ಭರ್ತಿಗೊಳಿಸಿದ ಅರ್ಜಿ ಗಳನ್ನು ಉಡುಪಿ ಜಿಲ್ಲೆಯ ಮಿಯಾರು, ಹಿರೇಬೆಟ್ಟು, ಕುತ್ಯಾರು, ಆರೂರು, ಶಂಕರನಾರಾಯಣ, ಸಿದ್ದಾಪುರ, ಕೋಟೇಶ್ವರ, ಹೆರಂಜಾಲು ವಸತಿ ಶಾಲೆಗಳಲ್ಲಿ ಸಲ್ಲಿಸಬೇಕು. ಪ್ರವೇಶ ಪರೀಕ್ಷೆಯು ಫೆ.18ರಂದು ಎಲ್ಲಾ ತಾಲೂಕು ಕೇಂದ್ರದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.