×
Ad

ಡಿ.31: ಶಿವಾಜಿ ಜಯಂತಿ ಪ್ರಯುಕ್ತ ಕ್ರೀಡಾಕೂಟ

Update: 2017-12-28 19:46 IST

ಉಡುಪಿ, ಡಿ.28: ಕಾರ್ಕಳ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಶಿವಾಜಿ ಜಯಂತಿ ಪ್ರಯುಕ್ತ ತಾಲೂಕು ಮಟ್ಟದ ಕ್ರೀಡಾಕೂಟ ವನ್ನು ಡಿ.31ರಂದು ಬೆಳಗ್ಗೆ 9ಗಂಟೆಗೆ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಕ್ರೀಡಾಕೂಟವನ್ನು ಕಾರ್ಕಳ ತಹಶೀಲ್ದಾರ್ ಮಹದೇವಯ್ಯ ಉದ್ಘಾಟಿಸಲಿ ರುವರು. ಕ್ರೀಡಾಕೂಟದಲ್ಲಿ ಎಲ್‌ಕೆಜಿ, ಯುಕೆಜಿ, 1-4ನೆ ತರಗತಿ, 5-7ತರ ಗತಿ, 8-12ನೆ ತರಗತಿ, 18ರಿಂದ 35ವರ್ಷದೊಳಗಿನ ಮತ್ತು 35-50 ವರ್ಷ ದೊಳಗಿನ ಪುರುಷರು ಮತ್ತು ಮಹಿಳೆಯರಿಗೆ, 50ವರ್ಷ ಮೇಲ್ಪಟ್ಟವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಾಘವ ನಾಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಕಾರ್ಯದರ್ಶಿ ಅಶೋಕ್ ನಾಕ್, ನಾಗೇಂದ್ರ ನಾಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News