ಡಿ.31: ಸುರತ್ಕಲ್‌ನಲ್ಲಿ ಶಾಸಕರಿಂದ ವರ್ಷದ ಸಂಭ್ರಮ
ಮಂಗಳೂರು, ಡಿ.28: ಹೊಸ ವರ್ಷವನ್ನು ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಡಿ.31ರ ಸಂಜೆ 4 ಗಂಟೆಗೆ ಸುರತ್ಕಲ್‌ನ ಶ್ರೀನಿವಾಸ ಮಲ್ಯ ಭವನದಲ್ಲಿ ವರ್ಷದ ಸಂಭ್ರಮವನ್ನು ಆಚರಿಸಲಾಗುವುದು ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಹೇಳಿದ್ದಾರೆ.
ಗುರುವಾರ ತನ್ನ ಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಅಂದಿನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡೀಸ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಅಂದು ಸುಮಾರು 2,500 ಮಹಿಳೆಯರಿಗೆ ತನ್ನ ವೈಯಕ್ತಿಕ ಖರ್ಚಿನಲ್ಲಿ ಸೀರೆ ವಿತರಿಸಲಾಗುವುದು. ಅಲ್ಲದೆ 315 ಕ್ರೈಸ್ತ ಸಮುದಾಯದ ಮತ್ತು 206 ಮುಸ್ಲಿಂ ಸಮುದಾಯ ಸಹಿತ ಕ್ಷೇತ್ರ ವ್ಯಾಪ್ತಿಯ 580ಕ್ಕೂ ಅಧಿಕ ಫಲಾನುಭವಿಗಳಿಗೆ ಸರಕಾರದ ವಿವಿಧ ಯೋಜನೆಯ ಅಂದಾಜು 4 ಕೋ.ರೂ. ಮೊತ್ತದ ಚೆಕ್ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪೃಥ್ವಿರಾಜ್, ಸೋಮನಾಥ, ಆನಂದ ಪಾಂಗಾಳ, ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.