ರೈಲ್ವೇಯಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ!
Update: 2017-12-28 20:53 IST
ಹೊಸದಿಲ್ಲಿ, ಡಿ.28: ಭಾರತೀಯ ರೈಲ್ವೇಯಲ್ಲಿ ಒಟ್ಟು 2,22,159 ಹುದ್ದೆಗಳು ಖಾಲಿಯಿವೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ 41,128 ಹುದ್ದೆಗಳು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಾದ ಹುದ್ದೆಗಳು ಎಂದವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಉತ್ತರ ರೈಲ್ವೇ ವಲಯದಲ್ಲಿ 27,537 ಹುದ್ದೆ, ಪೂರ್ವ ರೈಲ್ವೇ ವಲಯದಲ್ಲಿ 19,942 ಹುದ್ದೆ, ಕೇಂದ್ರ ರೈಲ್ವೇ ವಲಯದಲ್ಲಿ 19,651 ಹುದ್ದೆ , ಪಶ್ಚಿಮ ರೈಲ್ವೇ ವಲಯದಲ್ಲಿ 16,520 ಹುದ್ದೆ ಮತ್ತು ಪೂರ್ವ ರೈಲ್ವೇ ವಲಯದಲ್ಲಿ 17,065 ಹುದ್ದೆ ಖಾಲಿಯಿವೆ . ಈ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ