ಪರ್ಯಾಯ ಅವಧಿಯಲ್ಲಿ 11ಕೋಟಿ ವೆಚ್ಚದ ಕಾಮಗಾರಿ: ಪೇಜಾವರ ಶ್ರೀ

Update: 2017-12-28 15:25 GMT

ಉಡುಪಿ, ಡಿ.28: ಪರ್ಯಾಯದ ಎರಡು ವರ್ಷ ಅವಧಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಒಟ್ಟು 11ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಒಳಾಂಗಣ ಪೌಳಿ ನವೀಕರಣಕ್ಕೆ 3.5ಕೋಟಿ ರೂ., ರಾಜಾಂಗಣದ ಮೇಲ್ಭಾಗದಲ್ಲಿ ಮಧ್ವಂಗಣ ನಿರ್ಮಾಣಕ್ಕೆ 3ಕೋಟಿ ರೂ., ಎರಡು ಛತ್ರ ನಿರ್ಮಾಣಕ್ಕೆ 4ಕೋಟಿ ರೂ., ಯಾತ್ರಿ ನಿವಾಸದ ವಿಸ್ತರಣಾ ಕಾಮಗಾರಿಗೆ 50ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪಾಜಕದಲ್ಲಿರುವ ಆನಂದ ತೀರ್ಥ ವಿದ್ಯಾ ಸಂಸ್ಥೆಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸ ಲಾಗಿದೆ ಎಂದರು.

ಪರ್ಯಾಯ ಮುಗಿದ ನಂತರ ಹುಬ್ಬಳ್ಳಿಯ ಬುಡರಸಂಗಿಯಲ್ಲಿ ಸರಕಾರ ನೀಡಿರುವ 10 ಎಕರೆ ಜಾಗದಲ್ಲಿ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಅದೇ ರೀತಿ ಬೆಂಗಳೂರಿನಲ್ಲಿ 70ಕೋಟಿ ವೆಚ್ಚದ ಆಸ್ಪತ್ರೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ. ಶಿವಮೊಗ್ಗದಲ್ಲಿ ಈಗಾ ಗಲೇ ಗುರುತಿಸಲಾಗಿರುವ ಜಾಗದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News