ಕಾಶ್ಮೀರ ಸಚಿವ ಸಂಪುಟಕ್ಕೆ ಮೆಹಬೂಬ ಮುಫ್ತಿ ಸೋದರನ ಸೇರ್ಪಡೆ
Update: 2017-12-28 20:57 IST
ಜಮ್ಮು, ಡಿ.28: ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೋದರ ತಸ್ಸದುಖ್ ಮುಫ್ತಿ ಹಾಗೂ ಶಾಸಕ ಜಾವೇದ್ ಮುಸ್ತಫಾ ಮೀರ್ ಅವರು ಜಮ್ಮು ಕಾಶ್ಮೀರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜ್ಯಪಾಲ ಎನ್.ಎನ್.ವೋರಾ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಖ್ಯಾತ ಛಾಯಾಗ್ರಾಹಕರಾಗಿರುವ ತಸ್ಸದುಖ್ ಮುಫ್ತಿ, ಜನವರಿ 7ರಂದು ನಡೆದಿದ್ದ ತಮ್ಮ ತಂದೆ ಮುಫ್ತಿ ಮುಹಮ್ಮದ್ ಸಯೀದ್ ಅವರ ಪುಣ್ಯತಿಥಿಯ ಸಂದರ್ಭ ಪಿಡಿಪಿಯನ್ನು ಸೇರಿದ್ದರು. ಪಿಡಿಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ವಿಕ್ರಮಾದಿತ್ಯ ಸಿಂಗ್ ಅವರಿಂದ ತೆರವಾದ ರಾಜ್ಯದ ವಿಧಾನಪರಿಷತ್ ಸ್ಥಾನಕ್ಕೆ ಡಿ.22ರಂದು ತಸ್ಸದುಖ್ ಮುಫ್ತಿಯವರನ್ನು ನಾಮನಿರ್ದೇಶನ ಮಾಡಲಾಗಿತ್ತು.