ಭಾರತದ ಮೊದಲ ಬಿಟ್‌ಕಾಯಿನ್ ಆ್ಯಪ್ ಆರಂಭ
ಹೊಸದಿಲ್ಲಿ, ಡಿ. 28: ತಪ್ಪು ಕಾರಣಕ್ಕಾಗಿಯೇ ಬಿಟ್‌ಕಾಯಿನ್ ಗಮನ ಸೆಳೆದ ಸಂದರ್ಭ ಕ್ರಿಪ್ಟೋಕರೆನ್ಸಿ ಡೀಲರ್ ಪ್ಲುಟೋ ಎಕ್ಸ್‌ಚೇಂಜ್ ವರ್ಚುವಲ್ ಕರೆನ್ಸಿ ವರ್ಗಾವಣೆಯ ಭಾರತದ ಮೊದಲ ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಭಿಸುವುದಾಗಿ ಘೋಷಿಸಿದೆ.
ಮೊಬೈಲ್ ನಂಬರ್ ಬಳಸಿ ಬಿಟ್‌ಕಾಯಿನ್ ವರ್ಗಾಯಿಸಲು ಸಾಧ್ಯವಾಗುವ ದೇಶದ ಮೊದಲ ಆ್ಯಪ್ ಆಧರಿತ ವಾಲೆಟ್ ಅನ್ನು ಆರಂಭಿಸಲು ಕಂಪೆನಿ ಎಲ್ಲ ಸಿದ್ಧತೆ ನಡೆಸಿದೆ ಎಂದು ಪ್ಲುಟೋ ಎಕ್ಸ್‌ಚೇಂಜ್‌ನ ಸ್ಥಾಪಕ ಹಾಗೂ ಮುಖ್ಯ ಕಾಯರ್ದರ್ಶಿ ಭರತ್ ವರ್ಮಾ ಇಲ್ಲಿ ಪತ್ರಿಕಾಗೊಷ್ಠಿಯಲ್ಲಿ ಹೇಳಿದ್ದಾರೆ.
ಪಾವತಿ ಪ್ರಕ್ರಿಯೆದಾರರು, ವಿತ್ತ ಹೆಬ್ಬಾಗಿಲು ಹಾಗೂ ಬ್ಯಾಂಕ್‌ಗಳ ನಡುವಿನ ಸಂಯೋಜನೆ ಸಮಸ್ಯೆಯನ್ನು ಪ್ಲುಟೋ ಎಕ್ಸ್‌ಚೇಂಜ್ ಮೊಬೈಲ್ ಆ್ಯಪ್‌ನಿಂದ ಪರಿಹರಿಸಲು ಸಾಧ್ಯ ಎಂದು ವರ್ಮಾ ಹೇಳಿದ್ದಾರೆ.
ಉಳಿದೆಲ್ಲ ಆ್ಯಪ್‌ಗಳು ಈಗಾಗಲೆ ಮಾರುಕಟ್ಟೆಯಲ್ಲಿ ಬಿಟ್‌ಕಾಯಿನ್ ವಿಳಾಸ ಬಳಸಿ ವರ್ಗಾವಣೆ ಮಾಡುತ್ತಿವೆ. ಆದರೆ, ಪ್ಲುಟೊ ಮೊಬೈಲ್ ಸಂಖ್ಯೆಯನ್ನು ಬಳಸಿ ವರ್ಗಾವಣೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.