ಜುಗಾರಿ: ಆರು ಮಂದಿ ಬಂಧನ
Update: 2017-12-28 22:25 IST
ಬೈಂದೂರು, ಡಿ.28: ಕಿರಿಮಂಜೇಶ್ವರ ಪ್ರೌಢಶಾಲಾ ಹಿಂಭಾಗದ ಹಾಡಿ ಯಲ್ಲಿ ಡಿ. 27ರಂದು ಸಂಜೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾವುಂದದ ಇಂತಿಯಾಝ್ (26), ಇಸ್ತಾಕ್ (20), ಪೈಝಲ್(22), ಶಾವಿಲ್ (22), ಇಜಾಝ್(28), ಕಿರಿಮಂಜೇಶ್ವರದ ಮುಹಮ್ಮದ್(42) ಎಂಬವರನ್ನು ಬೈಂದೂರು ಪೊಲೀಸರು ಬಂಧಿಸಿ 2,200 ರೂ. ನಗದು ವಶಪಡಿ ಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.