×
Ad

ಗುಜರಾತ್, ಹಿಮಾಚಲ ಪ್ರದೇಶ ಕಾಂಗ್ರೆಸ್ ವೀಕ್ಷಕರಾಗಿ ಗೆಹ್ಲೋಟ್, ಶಿಂಧೆ ನೇಮಕ

Update: 2017-12-29 18:40 IST

ಹೊಸದಿಲ್ಲಿ, ಡಿ.29: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಆರಿಸಲು ನಡೆಯುವ ಪ್ರಥಮ ಶಾಸಕಾಂಗ ಸಭೆಯ ವೀಕ್ಷಕರಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಸುಶೀಲ್ ಕುಮಾರ್ ಶಿಂಧೆಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇಮಿಸಿದ್ದಾರೆ.

 ಗುಜರಾತ್‌ನಲ್ಲಿ ಗೆಹ್ಲೋಟ್ ಅವರಿಗೆ ಸಹಾಯಕರನ್ನಾಗಿ ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ರನ್ನು ಹಾಗೂ ಹಿಮಾಚಲಪ್ರದೇಶದಲ್ಲಿ ಶಿಂಧೆಯವರ ಸಹಾಯಕರನ್ನಾಗಿ ಮಹಾರಾಷ್ಟ್ರದ ಮಾಜಿ ಸಚಿವ ಬಾಳಾಸಾಹೇಬ್ ಥೋರಟ್‌ರನ್ನು ನೇಮಿಸಲಾಗಿದೆ. ಮುಂಬರುವ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸಂಯೋಜಕರಾಗಿ ಮಹಾರಾಷ್ಟ್ರದ ಶಾಸಕಿ ಯಶೋಮತಿ ಠಾಕುರ್‌ರನ್ನು ನೇಮಿಸಲಾಗಿದ್ದು, ಅನಿಲ್ ಥಾಮಸ್, ನೆಟ್ಟಾ ಡಿ’ಸೋಜ ಮತ್ತು ಸುಸಾಂತೊ ಬರ್ಗೋಹಿನ್‌ರನ್ನು ವಿಭಾಗೀಯ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಇವರು ಚುನಾವಣಾ ಸಂಬಂಧಿ ಕಾರ್ಯಗಳಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಪಿ.ಜೋಷಿ ಮತ್ತು ಕಾರ್ಯದರ್ಶಿ ವಿಜಯಲಕ್ಷ್ಮಿ ಯವರಿಗೆ ನೆರವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News