ರಾಷ್ಟ್ರೀಯ ಮಹಿಳಾ ಕಬಡ್ಡಿ ತಂಡ: ಕಾಣಿಯೂರಿನ ಸೌಮ್ಯ ಪೂಜಾರಿಗೆ ಸ್ಥಾನ
Update: 2017-12-29 20:39 IST
ಪುತ್ತೂರು, ಡಿ. 29: ರಾಷ್ಟ್ರೀಯ ಸೀನಿಯರ್ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ ಕಾಣಿಯೂರಿನ ಸೌಮ್ಯ ಪೂಜಾರಿ ಅವರು ಸ್ಥಾನ ಪಡೆದಿದ್ದಾರೆ.
ಕಾಣಿಯೂರಿನ ಅಬೀರಾದ ರಾಮಣ್ಣ ಪೂಜಾರಿ ಅವರ ಪುತ್ರಿ ಸೌಮ್ಯ ಪೂಜಾರಿ ಅವರು ಕಾಣಿಯೂರಿನ ಪ್ರಗತಿ ವಿದ್ಯಾಕೇಂದ್ರದ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಕಾಂ. ವ್ಯಾಸಾಂಗ ಮಾಡುತ್ತಿದ್ದಾರೆ.
ಡಿ.30ರಿಂದ ಹೈದ್ರಾಬಾದ್‌ನಲ್ಲಿ ನಡೆಯುವ ರಾಷ್ಟ್ರೀಯ ಸೀನಿಯರ್ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಅವರು ಕರ್ನಾಟಕ ತಂಡವನ್ನು ಪ್ರ್ರತಿನಿಧಿಸಲಿದ್ದಾರೆ.