×
Ad

ಮಾಜಿ ಫುಟ್ಬಾಲ್ ತಾರೆ ಕಿಂಗ್ ಜಾರ್ಜ್ ವೀ ಲೈಬೇರಿಯಾದ ನೂತನ ಅಧ್ಯಕ್ಷ

Update: 2017-12-29 21:02 IST

ಮೊನ್ರೋವಿಯ, ಡಿ.29: 70 ವರ್ಷಗಳಲ್ಲಿ ಇದೇ ಮೊದಲ ಬಾರಿ ಪ್ರಜಾಪ್ರಭುತ್ವವನ್ನು ಆಲಂಗಿಸುತ್ತಿರುವ ಲೈಬೇರಿಯಾದ ನೂತನ ಅಧ್ಯಕ್ಷರಾಗಿ ಮಾಜಿ ಫುಟ್ಬಾಲ್ ತಾರೆ ಜಾರ್ಜ್ ವೀ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಎಲೆನ್ ಜಾನ್ಸನ್ ಸಿರ್ಲೀಫ್ ಮುಂದಿನ ತಿಂಗಳು ವೀಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ. ಎಣಿಕೆ ಮಾಡಲಾದ 98.1% ಮತಗಳಲ್ಲಿ ಜಾರ್ಜ್ ವೀ 61.5% ಮತಗಳನ್ನು ಗಳಿಸಿದ್ದರೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೋಸೆಫ್ ಬೋಕೈ 38.5% ಮತಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಸ್ಥರಾದ ಜೆರೋಮ್ ಕೋರ್ಕೊಯಾ ಗುರುವಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News