ಮಾಲೆಗಾಂವ್ ಸ್ಫೋಟ ಹಿಂದೂ ರಾಷ್ಟ್ರ ಸ್ಥಾಪನೆಯತ್ತ ಹೆಜ್ಜೆ :ಎನ್‌ಐಎ ಪ್ರತಿಪಾದನೆ ಅಂಗೀಕರಿಸಿದ ನ್ಯಾಯಾಲಯ

Update: 2017-12-29 16:04 GMT

ಮುಂಬೈ, ಡಿ. 29: ಮಾಲೆಗಾಂವ್ ಸ್ಫೋಟ ಹಿಂದೂ ರಾಷ್ಟ್ರ ಸ್ಥಾಪನೆಯತ್ತ ಒಂದು ಹೆಜ್ಜೆ ಎಂಬ ಎನ್‌ಐಎಯ ಪ್ರತಿಪಾದನೆಯನ್ನು ವಿಶೇಷ ಎನ್‌ಐಎ ನ್ಯಾಯಾಲಯ ಅಂಗೀಕರಿಸಿದೆ.

2008ರಲ್ಲಿ ಸಂಭವಿಸಿದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆ. ಕರ್ನಲ್ ಪುರೋಹಿತ್ ಹಾಗೂ ಇತರ ಆರೋಪಿಗಳಿಗೆ ವಿಶೇಷ ಎನ್‌ಐಎ ನ್ಯಾಯಾಲಯ ಇತ್ತೀಚೆಗೆ ಜಾಮೀನು ನೀಡಿತ್ತು. ಈ ಬಗ್ಗೆ ವಿಶೇಷ ನ್ಯಾಯಮೂರ್ತಿ ಎಸ್. ಡಿ. ಟೆಕಾಲೆ ನೀಡಿರುವ 130 ಪುಟಗಳ ಆದೇಶ ಗುರುವಾರ ಲಭ್ಯವಾಗಿದ್ದು, ಮೊಕಾ ಅಡಿಯಲ್ಲಿ ಅವರನ್ನು ಅಪರಾಧಿಗಳು ಎಂದು ಪರಿಗಣಿಸಲು ಅವರ ವಿರುದ್ಧ ಸಾಕ್ಷಗಳ ಕೊರತೆ ಇದೆ ಎಂದು ಹೇಳಲಾಗಿದೆ.

 ಆರೋಪಿಗಳನ್ನು ಮೊಕಾ ಅಡಿಯಲ್ಲಿ ಪರಿಗಣಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪ್ರಾಸಿಕ್ಯೂಷನ್ ಹೆಸರಿಸಿದ 13 ಆರೋಪಿಗಳಲ್ಲಿ ಇಬ್ಬರೂ ಈಗಲೂ ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News