ಫಲಾಹ್ ಪ್ರೌಢ ಶಾಲೆಯಲ್ಲಿ ವಿಶ್ವ ಮಾನವ ದಿನಾಚರಣೆ
Update: 2017-12-29 21:34 IST
ತಲಪಾಡಿ, ಡಿ. 29: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ರಾಷ್ಟಕವಿ ಕುವೆಂಪುರವರ ಜನ್ಮದಿನವನ್ನು ವಿಶ್ವ ಮಾನವ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಮುಹಮ್ಮದ್ ರಫೀಕ್ ಅವರು ಕುವೆಂಪುರವರ ವಿಶ್ವಮಾನವ ಸಂದೇಶದ ಬಗ್ಗೆ ಉಪನ್ಯಾಸವನ್ನು ನೀಡಿದರು.
ವಿದ್ಯಾರ್ಥಿಗಳಾದ ಸಜಿನಾ ಪರ್ವೀನ್ ಹಾಗೂ ತಸ್ರೀಫಾ ಮೋಲ್ ಕುವೆಂಪುರವರ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು. ಸಝ್ವೀನಾ ಬೇಗಂ ಅವರು ಕುವೆಂಪುರವರ ಕವಿತೆಯನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕ ನವೀನ್ ಪ್ರಸಾದ್ ಮೊಂತೇರೋ, ಶಿಕ್ಷಕಿಯರಾದ ಲತಾ ಪಿ., ಚಂದ್ರಕಲಾ ವನಿತಾ, ಶಾಲಾ ವಿದ್ಯಾರ್ಥಿ ನಾಯಕ ಮುಹಮ್ಮದ್ ಸಂಶೀರ್, ವಿರೋಧ ಪಕ್ಷದ ನಾಯಕಿ ಆಯಿಶತ್ ಸಮ್ರೀನಾ ಉಪಸ್ಥಿತರಿದ್ದರು.