ಅಹ್ಮದ್ ಪಟೇಲ್; ಪುತ್ರ, ಅಳಿಯ ಸಿದ್ದೀಕಿ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ
ಹೊಸದಿಲ್ಲಿ ಡಿ. 29: ಗುಜರಾತ್ ಮೂಲದ ಸಂಡೇಸಾರಾ ಗುಂಪಿನ ಮಾಲಕನಿಂದ ನಗದು ಸ್ವೀಕರಿಸಿದ ಆರೋಪದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್, ಅವರ ಪುತ್ರ ಫೈಸಲ್ ಪಟೇಲ್ ಹಾಗೂ ಅಳಿಯ ಇರ್ಫಾನ್ ಸಿದ್ದೀಕಿಯನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿದೆ.
ಸಂಡೇಸಾರಾ ಗುಂಪು ತೆರಿಗೆ ವಂಚನೆ, ಬ್ಯಾಂಕ್ ಸಾಲ ಮರುಪಾವತಿಸದೇ ಇರುವುದು, ಕಪ್ಪು ಹಣ ಬಿಳುಪು ಮಾಡಿರುವ ಆರೋಪಕ್ಕೆ ಒಳಗಾಗಿದೆ. ಕಪ್ಪು ಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಟ್ಟಿರುವ ಸಂಡೇಸಾರಾ ಗುಂಪಿನ ಉದ್ಯೋಗಿ ಸುನಿಲ್ ಯಾದವ್, ಸಂಡೇಸಾರಾ ಗುಂಪಿನ ಮಾಲಕ ಚೇತನ್ ಸಂಡೇಸಾರಾ ಹಾಗೂ ಆತನ ಸಹವರ್ತಿ ಗಗನ್ ಧವನ್ ಅವರು ಸಿದ್ದೀಕ್‌ಗೆ ದೊಡ್ಡ ಮೊತ್ತದ ಹಣ ಹಸ್ತಾಂತರಿಸಿದ್ದಾರೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಲ್ಲದೆ ಫೈಸಲ್ ಪಟೇಲ್‌ರ ಕಾರು ಚಾಲಕನಿಗೂ ನಗದು ಹಸ್ತಾಂತರಿಸಲಾಗಿದೆ. ಇದನ್ನು ಅಹ್ಮದ್ ಪಟೇಲ್‌ನ ಪುತ್ರನಿಗೆ ಚೇತನ್ ಸಂಡೇಸಾರರ ಪರವಾಗಿ ನೀಡಲಾಗಿದೆ ಎಂದು ಕೂಡ ಸುನಿಲ್ ಯಾದವ್ ಜಾರಿ ನಿರ್ದೇಶನಾಲಯದ ಮುಂದೆ ಹೇಳಿದ್ದಾರೆ. ಈ ಬಗ್ಗೆ ಅಹ್ಮದ್ ಪಟೇಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.