ಉಪ್ಪಿನಂಗಡಿ : ಬಸ್‌ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿ ಮೃತ್ಯು
Update: 2017-12-29 22:25 IST
ಉಪ್ಪಿನಂಗಡಿ, ಡಿ.29: ಪ್ರವಾಸ ನಿಮಿತ್ತ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಬಸ್‌ನಿಂದ ಎಸೆಯಲ್ಪಟ್ಟು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಶುಕ್ರವಾರ ನಡೆದಿದೆ ಎನ್ನಲಾಗಿದೆ.
ಮಂಡ್ಯದ ಭೂತನವಸೂರು ಗ್ರಾಮದ ನಿವಾಸಿ ಚಂದ್ರು(12) ಮೃತ ಬಾಲಕ. ಮಂಡ್ಯದ ನೇತ್ರ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಶಾಲಾ ಪ್ರವಾಸದ ನಿಮಿತ್ತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್‌ನ ಬಾಗಿಲು ತೆರೆಯಲ್ಪಟ್ಟಿದ್ದು ಬಾಗಿಲ ಬಳಿ ಕುಳಿತ್ತಿದ್ದ ಚಂದ್ರ ಬಸ್‌ನಿಂದ ಹೊರಗೆಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಉಪ್ಪಿನಂಗಡಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.