×
Ad

ಡಿ.30: ಸುಳ್ಯಕ್ಕೆ ಸಲೀಂ ಮಂಬಾಡ್

Update: 2017-12-29 22:46 IST

ಮಂಗಳೂರು, ಡಿ. 29: ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಮಿತಿ ಹಮ್ಮಿಕೊಂಡಿರುವ ‘ಸಂತುಲಿತ ಚಿಂತನೆ, ಸ್ವಸ್ಥ ಸಮಾಜ’ ಅಭಿಯಾನದ ಅಂಗವಾಗಿ ಸುಳ್ಯ ಘಟಕದ ವತಿಯಿಂದ ಸಾರ್ವಜನಿಕ ಸಭೆಯು ಡಿ. 30ರಂದು ಸಂಜೆ 7ಕ್ಕೆ ಸುಳ್ಯದ ಗಾಂಧಿ ನಗರದ ಪೆಟ್ರೋಲ್ ಬಂಕ್ ಬಳಿ ನಡೆಯಲಿದೆ.

ಕೇರಳದ ಕುನ್ನಂಕುಳಂ ಟೌನ್ ಮಸೀದಿಯ ಖತೀಬ್ ಸಲೀಂ ಮಂಬಾಡ್ ಉಪನ್ಯಾಸ ನೀಡುವರು. 

ಡಿ.31: ಅಭಿಯಾನದ ಅಂಗವಾಗಿ ಡಿ.31ರಂದು ಸಂಜೆ 4:45ಕ್ಕೆ ಬಿ.ಸಿ.ರೋಡ್ ಪರ್ಲಿಯಾದ ಮಸ್ಜಿದ್ ಎ ರುಕಿಯಾ ಬಳಿ ಹಾಗೂ ಅಂದು ಸಂಜೆ 7ಗಂಟೆಗೆ  ಕಲ್ಲಡ್ಕದ ಅನುಗ್ರಹ ಕಾಲೇಜಿನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಸಲೀಂ ಮಂಬಾಡ್ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News