×
Ad

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರತಿಭೋತ್ಸವ: ದಾವೂದ್ ಚಾಂಪಿಯನ್

Update: 2017-12-29 23:00 IST

ನರಿಂಗಾನ, ಡಿ. 29: ಇತ್ತೀಚೆಗೆ ಅಲ್ ಮದೀನದಲ್ಲಿ ನಡೆದ ಉಳ್ಳಾಲ ಡಿವಿಷನ್ ಪ್ರತಿಭೋತ್ಸವದಲ್ಲಿ ಕ್ಯಾಂಪಸ್ ಜೂನಿಯರ್ ವಿಭಾಗದ ವಿವಿಧ ಸ್ಪರ್ಧೆಯಲ್ಲಿ ವಿಜೇತನಾಗುವ ಮೂಲಕ ಅಲ್ ಮದೀನ ವಿದ್ಯಾರ್ಥಿ ದಾವೂದ್ ಚ್ಯಾಂಪಿಯನ್‌ಶಿಫ್ ತನ್ನದಾಗಿಸಿಕೊಂಡಿದ್ದಾರೆ.

ಕನ್ನಡ ಭಾಷಣ, ಉರ್ದು ಭಾಷಣ ಹಾಗೂ ಕವನ ರಚನೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ ಮದೀನದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ದಾವೂದು ಮೊಂಟೆಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News