×
Ad

ಮಂಗಳೂರು: 'ಕರಾವಳಿ ಬೀಚ್ ಉತ್ಸವದಲ್ಲಿ ಕಡಲ ತೀರವೇ ಆಕರ್ಷಣೆ'

Update: 2017-12-29 23:07 IST

ಮಂಗಳೂರು, ಡಿ. 29: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡ ಕರಾವಳಿ ಉತ್ಸವದ ಅಂಗವಾಗಿ ಕರಾವಳಿ ಕಡಲ ತೀರ ಪಣಂಬೂರಿನಲ್ಲಿ ಇಂದು ಸರಳ ಸಮಾರಂಭದಲ್ಲಿ ಬೀಚ್ ಉತ್ಸವಕ್ಕೆ ಚಾಲನೆ ನೀಡುವುದರೊಂದಿಗೆ ಚಾಲನೆ ದೊರೆತಿದೆ.

 ಶಾಲಾ ಕಾಲೇಜುಗಳಿಗೆ ಕ್ರಿಸ್ಮ್‌ಸ್ ಹಬ್ಬದ ರಜೆ ಇರುವ ಕಾರಣ ಮತ್ತು ಕಡಲನ್ನು ವೀಕ್ಷಣೆ ಮಾಡಲು ವಿದ್ಯಾರ್ಥಿಗಳು ಹೊರ ಜಿಲ್ಲೆ ರಾಜ್ಯಗಳ ಜನರು ತಂಡ ತಂಡವಾಗಿ ಆಗಮಿಸುತ್ತಿದ್ದಾರೆ.

ಇಂದು ಸಂಜೆ ಪಣಂಬೂರು ಬೀಚ್ ಉತ್ಸವದ ಉದ್ಘಾಟನೆ ಬೃಹತ್ ವೇದಿಕೆಯನ್ನು ನಿರ್ಮಿಸಿದ್ದರು ಅಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಜನರಿದ್ದರು. ಆದರೆ ಕಡಲ ತೀರದಲ್ಲಿ ನೀರಿನ ಅಲೆಯೊಂದಿಗೆ ಆಟವಾಡುವವರು, ಕಡಲನ್ನು ನೋಡಲು ಬರುವವರು ಬೀಚ್ ಉತ್ಸವದ ಸಂದರ್ಭದಲ್ಲಿ ಕಡಲ ತೀರದಲ್ಲಿ ಗುಂಪಾಗಿ ಸೇರುತ್ತಿರುವುದು ಕಂಡು ಬಂತು. ಈ ವರ್ಷದ ಕೊನೆಯಲ್ಲಿ ಡಿ.31ರಂದು ಈ ಬಾರಿಯ ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಪಣಂಬೂರು ತೀರದಲ್ಲಿ ನಡೆಯಲಿದೆ.

ಬೀಚ್ ಉತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ ಬೀಚ್ ವಾಲಿಬಾಲ್, ಬೀಚ್ ತ್ರೋಬಾಲ್, ಸಂಜೆ ಆಹಾರೋತ್ಸವ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕರಾವಳೀ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭೇಟಿ ನೀಡುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಸರಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕರಾವಳಿ ಉತ್ಸವ ಮೈದಾನ,ಕದ್ರಿ ಪಾರ್ಕ್‌ಗೆ ಭೇಟಿ ನೀಡುತ್ತಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಡಿ.22ರಿಂದಲೂ ಪಣಂಬೂರು ಬೀಚ್‌ನ ಕಡಲಿನ ಆಕರ್ಷಣೆಯಿಂದ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಈ ಪ್ರವಾಸಿಗರಿಗೆ ಅಲ್ಲಿ ಇತರ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಕಡಲಿನ ವೀಕ್ಷಣೆಯತ್ತ ಆಕರ್ಷಿತರಾಗುವುದು ಕಂಡು ಬಂತು. ವಾಹನಗಳ ದಟ್ಟಣೆ ಇಂದು ಸಂಜೆಯಿಂದ ಹೆಚ್ಚುತ್ತಿರುವುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News