ದಲಿತ ಬಾಲಕಿ ಬೆಂಕಿ ಹಚ್ಚಿಕೊಂಡ ಘಟನೆ: ಆದಿತ್ಯನಾಥ್ ವಿರುದ್ಧ ಮೇವಾನಿ ವಾಗ್ದಾಳಿ

Update: 2017-12-30 14:49 GMT

ಹೊಸದಿಲ್ಲಿ, ಡಿ. 30: ಗೋರಖ್‌ಪುರದ ಗ್ರಾಮವೊಂದರಲ್ಲಿ ಮೂವರು ಯುವಕರಿಂದ ಕಿರುಕುಳಕ್ಕೆ ಒಳಗಾದ ಹದಿಹರೆಯದ ದಲಿತ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಬಂಧಿಸಿ ಗುಜರಾತ್ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ಜಿಗ್ನೇಶ್ ಮೇವಾನಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶುಭ ಮುಂಜಾನೆ ಸರ್, ದಯವಿಟ್ಟು ನಿಮ್ಮ ಆಪ್ತ ಮುಖ್ಯಮಂತ್ರಿ ಆದಿತ್ಯನಾಥ್ ಅವರ ರಿಪೋರ್ಟ್ ಕಾರ್ಡ್ ಪರಿಶೀಲಿಸಿ. ಉತ್ತರಪ್ರದೇಶದಲ್ಲಿ ರೋಮಿಯಗಳ ಕಿರುಕುಳದಿಂದ ಬಾಲಕಿಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಳು. ನಿಮ್ಮ ಆ್ಯಂಟಿ ರೋಮಿಯೊ ಸ್ಕ್ವಾಡ್ ಮಹಿಳೆಯರು ಹಾಗೂ ಬಾಲಕಿಯರನ್ನು ರಕ್ಷಿಸಲು ಇರುವುದೇ ಅಥವಾ ಪ್ರೇಮಿಗಳಿಗೆ ಕಿರುಕುಳ ನೀಡಲು ಇರುವುದೇ ಎಂದು ಮೇವಾನಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಆದಿತ್ಯನಾಥ್ ಅವರು ಮುಖ್ಯಮಂತ್ರಿ ಆದ ಬಳಿಕ ರಾಜ್ಯದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಲು ಆ್ಯಂಟಿ ರೋಮಿಯೊ ಸ್ಕ್ವಾಡ್ ರೂಪಿಸಿದ್ದರು.

  ಗೋರಖ್‌ಪುರ ಜಿಲ್ಲೆಯಲ್ಲಿ ಬುಧವಾರ ಮೂವರು ಯುವಕರು 17 ವರ್ಷದ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿ ಥಳಿಸಿದ್ದರು. ಈ ಘಟನೆ ಬಳಿಕ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಈಗ ಬಾಲಕಿ ಶೇ. 70 ಸುಟ್ಟ ಗಾಯಗಳಿಂದ ಬಿಆರ್‌ಡಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News