ಮಲ್ಪೆ ಸ್ಕೂಲ್‌ನ ವಾರ್ಷಿಕ ಕ್ರೀಡಾಕೂಟ
Update: 2017-12-30 21:01 IST
ಮಲ್ಪೆ, ಡಿ.30: ಮಲ್ಪೆ ಫ್ಲವರ್ಸ್ ಆಫ್ ಪ್ಯಾರಾಡೈಸ್ ಪಬ್ಲಿಕ್ ಸ್ಕೂಲ್‌ನ 2017-18ನೆ ಸಾಲಿನ ವಾರ್ಷಿಕ ಕ್ರೀಡಾಕೂಟವು ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಗಳಾಗಿ ಮಲ್ಪೆಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ., ಡಾ.ವಿಜೇಶ್ ಶೆಟ್ಟಿ ಮಲ್ಪೆಭಾಗವಹಿಸಿದ್ದರು. ಶಾಲಾ ಸಂಯೋಜಕ ಕರಾಮತುಲ್ಲಾ, ಕಾರ್ಯದರ್ಶಿ ಫಯಾಜ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ವೇತಾ ಶೆಟ್ಟಿ, ಉರ್ದು ವಿಭಾಗದ ಮುಖ್ಯಸ್ಥ ಇಮ್ರಾನುಲ್ಲಾ ಖಾನ್ ಮೌಲಾನ ಉಪಸ್ಥಿತರಿದ್ದರು.
ಕಿರಿಯ ವಿಭಾಗದ ಮುಖ್ಯೋಪಾಧ್ಯಾಯಿನಿ ಶಾಹೀನ್ ಶೇಖ್ ವಂದಿಸಿ ದರು. ಶಾಲಾ ಸಹಶಿಕ್ಷಕಿ ಶೀತಲ್ ಕಾರ್ಯಕ್ರಮ ನಿರೂಪಿಸಿದರು.