ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಕುಕ್ಯಾನ್ ಪುನರಾಯ್ಕೆ
ಮಂಗಳೂರು, ಡಿ. 30: ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 23ನೆ ಸಮ್ಮೇಳನದಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ವಿ. ಕುಕ್ಯಾನ್ ಪುನರಾಯ್ಕೆಯಾಗಿದ್ದಾರೆ.
ಸಹಾಯಕ ಕಾರ್ಯದರ್ಶಿಗಳಾಗಿ ಬಿ. ಶೇಖರ್ ಹಾಗೂ ವಿ.ಎಸ್.ಬೇರಿಂಜ, ಕೋಶಾಧಿಕಾರಿಯಾಗಿ ಎ. ಪ್ರಭಾಕರ್ ರಾವ್ ಅಯ್ಕೆಗೊಂಡರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್.ವಿ. ರಾವ್, ಕೆ.ವಿ. ಭಟ್, ಆರ್.ಡಿ ಸೋನ್ಸ್, ಸುರೇಶ್ ಕುಮಾರ್ ಬಂಟ್ವಾಳ್, ಎಂ. ಕರುಣಾಕರ್, ಸರಸ್ವತಿ ಕಡೇಶಿವಾಲಯ ಮತ್ತು ಆಹ್ವಾನಿತರಾಗಿ ಪಿ. ಸಂಜೀವ ಹಾಗೂ ಇವರೆಲ್ಲರನ್ನು ಒಳಗೊಂಡ ಒಟ್ಟು 21 ಸದಸ್ಯರ ಜಿಲ್ಲಾ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
2018 ಜನವರಿಯಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ 23ನೆ ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲೆಯಿಂದ 21 ಪ್ರತಿನಿಧಿಗಳನ್ನು ಆರಿಸಲಾಯಿತು.
2017ರ ಡಿ.24ರಿಂದ 26ರವರೆಗೆ ಪಕ್ಷದ 23ನೆ ಜಿಲ್ಲಾ ಸಮ್ಮೇಳನ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು. ಡಿ.24 ಮತ್ತು 25ರಂದು ಕಾ.ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ಪ್ರತಿನಿಧಿ ಸಮ್ಮೇಳನ ಹಾಗೂ 26ರಂದು ಹಂಪನಕಟ್ಟೆಯಿಂದ ಬೃಹತ್ ರ್ಯಾಲಿ ನಂತರ ನೆಹರೂ ಮೈದಾನದ ಗೋವಿಂದ ಪನ್ಸಾರೆ ವೇದಿಕೆಯಲ್ಲಿ ಬಹಿರಂಗ ಸಮ್ಮೇಳನ ಜರಗಿತು.