ವಿದ್ಯುತ್ ಆಘಾತ: ಕೂಲಿ ಕಾರ್ಮಿಕ ಮೃತ್ಯು
Update: 2017-12-30 21:39 IST
ಪಡುಬಿದ್ರೆ, ಡಿ. 30: ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕನೊಬ್ಬನಿಗೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಉಚ್ಚಿಲದಲ್ಲಿ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಬಾಗಲಕೋಟೆ ನಿವಾಸಿ ಹನುಮಂತ (30) ಎಂದು ಗುರುತಿಸಲಾಗಿದೆ.
ಉಚ್ಚಿಲದ ದೇವಸ್ಥಾನದ ಬಳಿ ಆಲಡೆ ನಿರ್ಮಾಣದ ಕಾರ್ಯಕ್ಕೆ ಏಣಿಯನ್ನು ಅಳವಡಿಸಿದ್ದರು. ಏಣಿಗೆ ವಿದ್ಯುತ್ ಪ್ರವಹಿಸಿ ಹನುಮಂತ ಮೃತಪಟ್ಟಿದ್ದಾರೆ.
ಪಡುಬಿದ್ರೆ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ್ದಾರೆ. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.