×
Ad

ಕಿನ್ಯಾ: ಎಸ್ಸೆಸ್ಸೆಫ್ ವತಿಯಿಂದ ಸೌಹಾರ್ದ ಸೈಕಲ್ ರ‍್ಯಾಲಿ

Update: 2017-12-30 22:17 IST

ಮಂಗಳೂರು, ಡಿ. 30: ಕೇರಳದ ಕಾರಂದೂರ್ ಮರ್ಕಝಿನ 40ನೇ ವಾರ್ಷಿಕ ಮಹಾ ಸಮ್ಮೇಳನಾ ಪ್ರಚಾರಾರ್ತ ಕಿನ್ಯಾ ಕುತುಬಿ ನಗರ - ಮೀನಾದಿ ಎಸ್ಸೆಸ್ಸೆಫ್ ಸಂಘಟನೆಯ ಅಡಿಯಲ್ಲಿ ತಾಜುಲ್ ಹುದಾ ಸಂಘದಿಂದ ಸೈಕಲ್ ರ‍್ಯಾಲಿ ಆಯೋಜಿಸಲಾಯಿತು.

ಕುತುಬಿ ನಗರದಿಂದ ಕಿನ್ಯದ ಆತ್ಮೀಯ ನೇತಾರ ಹುಸೈನ್ ವಲಿಯುಲ್ಲಾಹಿ (ಖ.ಸಿ)ರವರ ದರ್ಗಾದ ವರೆಗಿನ ಈ ಆಕರ್ಷಣೀಯ ರ‍್ಯಾಲಿ ನಡೆಯಿತು.

ಈ ಸಂದರ್ಭ ಎಸ್ಸೆಸ್ಸೆಫ್ ಸಂಘಟನೆ ಅಧ್ಯಕ್ಷ ಇಕ್ಬಾಲ್ ಕುತುಬಿ ನಗರ, ಉಪಾಧ್ಯಕ್ಷ  ಇರ್ಫಾನ್ ಮೌಲವಿ ಕುತುಬಿ ನಗರ, ಪ್ರಮುಖರಾದ ಅಬ್ಬಾಸ್ ಕನಕಮುಗರ್, ಯಾಕೂಬ್ ಕುತುಬಿ ನಗರ ಮತ್ತು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News