×
Ad

ಡಿ. 31: ಎಲ್ಲೂರಿನಲ್ಲಿ ಎಸ್ಸೆಸ್ಸೆಫ್ ಪ್ರತಿಭೋತ್ಸವ

Update: 2017-12-30 22:49 IST

ಮಂಗಳೂರು, ಡಿ. 30: ಎಸ್ಸೆಸ್ಸೆಫ್ ಕಾಪು ಡಿವಿಷನ್ ಮಟ್ಟದ ಪ್ರತಿಭಾ ಕಲಾ ಕಮ್ಮಟ  ಡಿ. 31ರಂದು ಉಚ್ಚಿಲ ಸಮೀಪದ ಎಲ್ಲೂರಿನ ದಾರುಲ್ ಅಮಾನ್‌ನಲ್ಲಿ ನಡೆಯಲಿದೆ.

ಪ್ರತಿಭೋತ್ಸವ ಸಮಿತಿ ಅಧ್ಯಕ್ಷ ಕೆ.ಪಿ. ಶರೀಫ್ ಸಖಾಫಿ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಪ್ರತಿಭೋತ್ಸವ ಉದ್ಘಾಟಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ದಾರುಲ್ ಅಮಾನ್‌ನ ಮುಖ್ಯಸ್ಥ ಅಲ್‌ಹಾಜ್ ಎಂ. ಸಲೀಂ ಮದನಿ ಕುತ್ತಾರ್ ದುವಾ ಆಶೀರ್ವಚನ ಮಾಡಲಿದ್ದಾರೆ. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಅಶ್ರಫ್ ರಝಾ ಅಂಜದಿ ಉದ್ಘಾಟಿಸುವ ಸಭೆಯಲ್ಲಿ ಕಾಪು ಡಿವಿಷನ್ ಅಧ್ಯಕ್ಷ ಮುಹಿಯ್ಯುದ್ದೀನ್ ಸಖಾಫಿ ಪೈಯ್ಯಾರು ಅಧ್ಯಕ್ಷತೆ ವಹಿಸಲಿದ್ದಾರೆ.

ಕಾಪು ಡಿವಿಷನ್ ವ್ಯಾಪ್ತಿಯ ಎರಡು ಸೆಕ್ಟರ್‌ಗಳು 10ಕ್ಕೂ ಮಿಕ್ಕ ಕಾಲೇಜು ಕ್ಯಾಂಪಸ್ ಒಳಗೊಂಡ ಜೂನಿಯರ್, ಸೀನಿಯರ್, ಜನರಲ್, ದಅ್ವಾ ಜೂನಿಯರ್, ದಅ್ವಾ ಸೀನಿಯರ್, ಕ್ಯಾಂಪಸ್ ಜೂನಿಯರ್, ಕ್ಯಾಂಪಸ್ ಸೀನಿಯರ್ ಎಂಬ ಏಳು ವಿಭಾಗಗಳಲ್ಲಿ ತಾಜುಲ್ ಉಲಮಾ, ನೂರುಲ್ ಉಲಮಾ, ಮರ್ಹೂಂ ಝಮೀರ್ ಮಲಂಗೋಳಿ ಎಂಬಿ ಮೂರು ವೇದಿಕೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಡಿವಿಷನ್ ಪ್ರತಿಭೋತ್ಸವ ಸಮಿತಿ ಸಂಚಾಲಕ ಆಸಿಫ್ ಬೆಳಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News