ಕರ್ನಾಟಕ ರಾಜ್ಯ ವಕ್ಫ್ ಮಂಡಳಿ: ಮಸೀದಿಗಳ ನೋಂದಣಿಗೆ ಸೂಚನೆ
Update: 2017-12-30 22:52 IST
ಮಂಗಳೂರು, ಡಿ.30: ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗದ ಮಸೀದಿಗಳನ್ನು ನೋಂದಣಿ ಮಾಡಲು ಕ್ರಮ ಕೈಗೊಳ್ಳುವಂತೆ ಮಸೀದಿಗಳ ಅಧ್ಯಕ್ಷರು/ ಕಾರ್ಯದರ್ಶಿಯನ್ನು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಕಣಚೂರು ಮೋನು ಕೋರಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ (ದೂ.ಸಂ.: 0824-2420078/9449848589) ಜಿಲ್ಲಾ ವಕ್ಫ್ ಕಚೇರಿ, ಮೌಲಾನಾ ಆಝಾದ್ ಭವನ, ಎರಡನೇ ಮಹಡಿ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿ ಕಚೇರಿಯ ಸಮಯದಲ್ಲಿ ಭೇಟಿಯಾಗಬಹುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.