ಜ.5ರಿಂದ ಸವಣೂರಿನಲ್ಲಿ ಜಿಲ್ಲಾ ಯುವಜನ ಮೇಳ
Update: 2017-12-30 23:15 IST
ಮಂಗಳೂರು, ಡಿ. 30: ದ.ಕ. ಜಿಲ್ಲಾಡಳಿತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದ.ಕ. ಜಿಲ್ಲಾ ಪಂಚಾಯತ್, ಪುತ್ತೂರು ತಾ ಪಂ., ಗ್ರಾಮ ಪಂಚಾಯತ್ ಸವಣೂರು, ದ.ಕ. ಜಿಲ್ಲಾ ಯುವಜನ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವಕ, ಯುವತಿ ಮಂಡಲಗಳ ಸಹಯೋಗದೊಂದಿಗೆ ಜ. 5, 6 ಹಾಗೂ 7ರಂದು ಸವಣೂರಿನ ದ.ಕ ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ ಜಿಲ್ಲಾ ಮಟ್ಟದ ಯುವಜನಮೇಳ ಕಾರ್ಯಕ್ರಮವು ನಡೆಯಲಿದೆ.
ಕಾರ್ಯಕ್ರಮ ಉದ್ಘಾಟನೆಯನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಥ ರೈ ಅವರು ಮಾಡಲಿದ್ದಾರೆ, ಸುಳ್ಯ ಶಾಸಕ ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.