ಕೃಷ್ಣಾಪುರ: ಪಿಎಫ್‌ಐಯಿಂದ ಪ್ರವಾದಿ ಸಂದೇಶ ಕಾರ್ಯಕ್ರಮ
ಸುರತ್ಕಲ್, ಡಿ. 31: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೃಷ್ಣಾಪುರ ಏರಿಯಾ ವತಿಯಿಂದ ಇತ್ತೀಚೆಗೆ ಕೃಷ್ಣಾಪುರ ಪ್ಯಾರಡೈಸ್ ಮೈದಾನದಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಖಾದರ್ ಪೈಝಿ ದುವಾ ನೆರವೇರಿಸಿದರು. ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಜಿಲ್ಲಾ ಸಮಿತಿ ಸದಸ್ಯ ಇಮ್ತಿಯಾಝ್ ತುಂಬೆ ಮಾತನಾಡಿದರು.
ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೃಷ್ಣಾಪುರ ಏರಿಯಾ ಅಧ್ಯಕ್ಷ ಆಸಿಫ್ ಇಕ್ಬಾಲ್, ದ.ಕ. ಜಿಲ್ಲಾ ಕಾರ್ಯದರ್ಶಿ ಸಿರಾಜುದ್ದೀನ್, ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಎಂ. ಹುಸೈನ್, ಕೃಷ್ಣಾಪುರ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್, 6ನೆ ಬ್ಲಾಕ್ ಕೃಷ್ಣಾಪುರ ಮಸ್ಜಿದುತ್ತೈಬಾದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್, ಅಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್, ಪಿಎಫ್‌ಐನ ಶೇಕಬ್ಬ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣ್ಯರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೃಷ್ಣಾಪುರ ಏರಿಯ ವತಿಯಿಂದ ಸ್ಮರಣಿಕ ನೀಡಿ ಗೌರವಿಸಲಾಯಿತು. ಅಬ್ದುಲ್ ಜಬ್ಬಾರ್ ಸ್ವಾಗತಿಸಿದರು. ಪಿಎಫ್‌ಐ ಸುರತ್ಕಲ್ ವಲಯ ಉಪಾಧ್ಯಕ್ಷ ಅನ್ಸಾರ್ ಕೃಷ್ಣಾಪುರ ವಂದಿಸಿದರು. ಮುಹಮ್ಮದ್ ಶಾಹಿಲ್ ಕುರ್‌ಆನ್ ಕಿರಾಅತ್ ವಾಚಿಸಿದರು.