ಮೂಡುಬಿದಿರೆಯಲ್ಲಿ ಸಿಪಿಎಂ 22ನೇ ರಾಜ್ಯ ಸಮ್ಮೇಳನ: ರ‍್ಯಾಲಿ

Update: 2018-01-02 17:40 GMT

ಮೂಡುಬಿದಿರೆ, ಜ.2: ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಸಿಪಿಎಂ 22ನೆ ರಾಜ್ಯ ಸಮ್ಮೇಳನದ ಅಂಗವಾಗಿ ಆಲಂಗಾರ್‌ನಿಂದ ಮೂಡುಬಿದಿರೆ ಸ್ವರಾಜ್ ಮೈದಾನದವರೆಗೆ ಆಕರ್ಷಕ ರ‍್ಯಾಲಿ ನಡೆಯಿತು.

ಸ್ವರಾಜ್ಯ ಮೈದಾನದಲ್ಲಿ ಸೇರಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಸಿಪಿಎಂ ಕೇಂದ್ರ ಸಮಿತಿಯ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮುಖ್ಯ ಭಾಷಣ ಮಾಡಿದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಹಾಗೂ ರಾಜ್ಯ ಸಮಿತಿಯ ಸದಸ್ಯೆ ಎಸ್.ವರಲಕ್ಷ್ಮಿ ಮಾತನಾಡಿದರು.

ಸಮ್ಮೇಳನವು ಇಂದು ಅಪರಾಹ್ನ ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿರುವ ಸಂಜೀವ ಶೆಟ್ಟಿ ಮಲ್ಟಿಪರ್ಪಸ್ ಹಾಲ್‌ನಲ್ಲಿ ನಡೆಯಲಿದೆ. ಸೀತಾರಾಂ ಯೆಚೂರಿ ಸಮ್ಮೇಳನ ಉದ್ಘಾಟಿಸುವರು. ಹಿರಿಯ ಸಿಪಿಎಂ ಮುಖಂಡ ಕೆ.ಆರ್.ಶ್ರೀಯಾನ್ ಅಧ್ಯಕ್ಷತೆ ವಹಿಸುವರು.

ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಮಂಗಳೂರು ವಿವಿ ಕ್ರೈಸ್ತ ಪೀಠದ ನಿವೃತ್ತ ನಿರ್ದೇಶಕ ಫಾ.ಪ್ರೊ.ಜಾನ್ ಫೆರ್ನಾಂಡಿಸ್ ಸಾರ್ವಜನಿಕರನ್ನು ಸ್ವಾಗತಿಸಲಿರುವರು. ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಕೇರಳದ ಮಾಜಿ ಸಚಿವ ಎಂ.ಎ.ಬೇಬಿ ಉಪಸ್ಥಿತರಿರುವರು.

 31 ವರ್ಷಗಳ ಬಳಿಕ ಸಿಪಿಎಂ ರಾಜ್ಯ ಸಮ್ಮೇಳನವು ದ.ಕ. ಜಿಲ್ಲೆಯಲ್ಲಿ ನಡೆಯುತ್ತಿದೆ.

ಕೋರೆಗಾಂವ್'ನಲ್ಲಿ ದಲಿತರ ಮೇಲೆ ದಾಳಿ : ಸಿಪಿಐಎಂ ಖಂಡನೆ

ಕೊರೆಗಾಂವ್  ವಿಜಯದ ೨೦೦ ವರ್ಷಗಳ ಉತ್ಸವದ ಮೇಲೆ  ಸಂಘಪರಿವಾರ ಮಾಡಿರುವ ದಾಳಿಯನ್ನು ಮೂಡುಬಿದಿರೆಯಲ್ಲಿ ಇಂದು ಉದ್ಘಾಟನೆಗೊಂಡ ಸಿಪಿಐ(ಎಂ) 22 ನೇ ಕರ್ನಾಟಕ ರಾಜ್ಯ ಸಮ್ಮೇಳನ ತೀವ್ರವಾಗಿ ಖಂಡಿಸಿದೆ

ಸಮೇಳನದ ಬಹಿರಂಗ ಅಧಿವೇಶನದಲ್ಲಿ ರಾಜ್ಯ ಕಾರ್ಯದರ್ಶಿ ಜಿ.ವಿ ಶ್ರೀರಾಮ ರೆಡ್ಡಿ ಮಂಡಿಸಲಾದ ನಿರ್ಣಯವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿ ಮರಾಠ ಪೇಶ್ವಯ ಸೈನಿಕರು ನಡೆಸಿದ ಅಸ್ಪೃಶ್ಯತೆ ವಿರುದ್ದ ಧೀರೋದತ್ತ ಹೋರಾಟವನ್ನು ದಲಿತರು 200 ವರ್ಷಗಳ ಕೆಳಗೆ ನಡೆಸಿ ವಿಜಯಿಯಾಗಿದ್ದ ದಿನವೇ ಕೋರೆಂಗಾವ ದಿನಾಚರಣೆ. ಆದರೆ ಮತೀಯವಾದಿಗಳು ಈಗ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು  ಹಾಗೂ ಮಹಿಳಯರು ಸ್ವಾತಂತ್ರ್ಯಾನಂತರ ಪಡೆದುಕೊಂಡ ಅಲ್ಪ ಸ್ವಲ್ಪ ಸ್ವಾತಂತ್ರ್ಯದ ಮೇಲೆ ಈ ರೀತಿ ದಾಳಿ ನಡೆಸಿ ಅವರ ಸ್ವಾತಂತ್ರದ ನಾಶದ ಸಂಚನ್ನು ರೂಪಿಸಿರುವುದನ್ನು ಸಿಪಿಐ(ಎಂ) ರಾಜ್ಯ ಸಮ್ಮೇಳನ‌ ಖಂಡಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News