×
Ad

ಚೊಕ್ಕಬೆಟ್ಟು: ಎಸ್ಕೆಎಸೆಸ್ಸೆಫ್-ಎಸ್‌ವೈಎಸ್ ಕಚೇರಿ ಉದ್ಘಾಟನೆ

Update: 2018-01-02 18:57 IST

ಮಂಗಳೂರು,ಜ.2: ಎಸ್ಕೆಎಸೆಸ್ಸೆಫ್ ಮತ್ತು ಎಸ್‌ವೈಎಸ್ ಚೊಕ್ಕಬೆಟ್ಟು ಇದರ ಕಚೇರಿ ಉದ್ಘಾಟನೆ, ಮತಪ್ರವಚನ, ಮಜ್ಲಿಸುನ್ನೂರ್ ಸಂಗಮ, ಸಮಸ್ತ ನೇತಾರರ ಸಂಸ್ಮರಣೆ ಕಾರ್ಯಕ್ರಮವು ಚೊಕ್ಕಬೆಟ್ಟು ಸರಕಾರಿ ಶಾಲಾ ಮೈದಾನದಲ್ಲಿ ಜರಗಿತು.

ಕಚೇರಿ ಉದ್ಘಾಟಸಿ ಮಾತನಾಡಿದ ಚೊಕ್ಕಬೆಟ್ಟು ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಇಸ್ಲಾಮೀ ತತ್ವಾದರ್ಶದೊಂದಿಗೆ ಆದರ್ಶವನ್ನು ಮೈಗೂಡಿಸಿಕೊಂಡು ಸೇವಾ ಪ್ರವೃತ್ತರಾಗಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಕರೀಂ ಫೈಝಿ ಕುಂತೂರು ಯುವಜನತೆ ಇಸ್ಲಾಮಿನ ಆದರ್ಶಗಳಿಂದ ವಿಮುಖರಾಗದೆ ಧರ್ಮದ ಕಾವಲುಗಾರರಾಗಬೇಕು ಎಂದು ಕರೆ ನೀಡಿದರು.

ಅತ್ರಾಡಿ ಖಾಝಿ ಅಲ್‌ಹಾಜ್ ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮುಮ್ತಾಝ್ ಅಲಿ, ಎಸ್ಕೆಎಸೆಸ್ಸೆಫ್ ಚೊಕ್ಕಬೆಟ್ಟು ಶಾಖೆಯ ಅಧ್ಯಕ್ಷ ಎಂ. ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ, ಮಾಜಿ ಅಧ್ಯಕ್ಷ ಟಿ. ನೂರ್ ಮುಹಮ್ಮದ್, ಹಾಜಿ ಮುಹಮ್ಮದ್ ಜತ್ತಬೆಟ್ಟು, ಕಾರ್ಪೊರೇಟರ್ ಅಯಾಝ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ, ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾ ಕೋಶಾಧಿಕಾರಿ ಜಲೀಲ್ ಬದ್ರಿಯಾ, ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಸುರತ್ಕಲ್ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಶರೀಫ್ ಫೈಝಿ, ಕಮಾಲ್ ಹುಸೈನ್, ಮುಹಮ್ಮದ್ ಆಸೀಫ್, ಮುಹಮ್ಮದ್ ಶರೀಫ್, ಯು. ಅಬ್ದುಲ್ಲಾ ದಾರಿಮಿ, ಹಾಜಿ ಮುಹಮ್ಮದ್ ಶರೀಫ್, ಹಮೀದ್ ಹಾಜಿ ಚೊಕ್ಕಬೆಟ್ಟು, ಉಸ್ಮಾನ್ ಅಬ್ದುಲ್ಲಾ, ಎಂ. ಮುಹಮ್ಮದ್, ಹಾಜಿ ಅಬ್ದುರ್ರಹ್ಮಾನ್ ಕನ್ನಂಗಾರು, ಎಸ್ಕೆಎಸೆಸ್ಸೆಫ್ ಮುಲ್ಕಿ ಕ್ಲಸ್ಟರ್‌ನ ಅಬ್ಬಾಸ್ ಮುಸ್ಲಿಯಾರ್, ಶರೀಫ್ ಹಾಜಿ ಜೋಕಟ್ಟೆ, ಅಬ್ದುಲ್ಲಾ ಬಾವಾ ಉಪಸ್ಥಿತರಿದ್ದರು.

ಎಸ್ಕೆಎಸೆಸ್ಸೆಫ್ ಸುರತ್ಕಲ್ ವಲಯ ಕಾರ್ಯದರ್ಶಿ ವೌಲಾನಾ ಹೈದರ್ ಅಲಿ ಚೊಕ್ಕಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News