ಬೆಂಗ್ರೆ ಆಟದ ಮೈದಾನ ಕಬಳಿಸಲು ಯತ್ನ - ಆರೋಪ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2018-01-02 14:11 GMT

ಮಂಗಳೂರು, ಜ.2: ನಗರದ ಬೆಂಗ್ರೆ ಎ.ಆರ್.ಕೆ. ಶಾಲೆಯ ಆಟದ ಮೈದಾನಕ್ಕೆಂದು ನೀಡಿರುವ ಜಾಗವನ್ನು ಕೆಲವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಆಟದ ಮೈದಾನವನ್ನು ಹೊಂದಿರಬೇಕು. ಅದರಂತೆ ಆಟದ ಮೈದಾನಕ್ಕೆ ನೀಡಿದ ಜಾಗವನ್ನು ಕಬಳಿಸಲು ಹೊರಟಿದ್ದಾರೆ. ಇನ್ನು ಕೆಲವರು ಅಂಗನವಾಡಿ ಕೇಂದ್ರವು ಅದೇ ಜಾಗದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವುದನ್ನು ವಿದ್ಯಾರ್ಥಿಗಳು ಖಂಡಿಸಿದರು.

ಎಸ್‌ಐಒ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಕಾರ್ಯದರ್ಶಿ ಅಫ್ನಾನ್ ಹಸನ್, ಬೆಂಗರೆ ವಲಯ ಕಾರ್ಯದರ್ಶಿ ತಿಹಾನ್ ಬೆಂಗರೆ, ಇಮ್ರಾನ್ ಬೆಂಗರೆ ಮತ್ತು ಪಿ.ಟಿ.ಎ ಸದಸ್ಯರು ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News