ತನ್ನ ಅಕ್ರಮ ಜಮೀನ ಬಗ್ಗೆ ಸೂಕ್ತ ತನಿಖೆ ನಡೆಸಲಿ : ಸಚಿವ ರೈಗೆ ರಾಜೇಶ್ ನಾಯಕ್ ಸವಾಲು

Update: 2018-01-02 13:33 GMT

ಬಂಟ್ವಾಳ, ಜ.2:ತನ್ನ ಬಳಿ ಅಕ್ರಮ ಜಮೀನು ಇದೆ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು, ಕೇವಲ ಭಾಷಣದಲ್ಲಿ ಕೇಳಿಕೆ ನೀಡಿ ಜಾರಿಕೊಳ್ಳುವ ಬದಲು ಸೂಕ್ತ ತನಿಖೆ ನಡೆಸಲಿ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಸವಾಲು ಹಾಕಿದ್ದಾರೆ.

ಡಿ.31ರಂದು ಬಿ.ಸಿ.ರೋಡ್‍ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು "ನನ್ನ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳುವ ಬಿಜೆಪಿ ಕಾರ್ಯಕರ್ತರು ರಾಜೇಶ್ ನಾಯಕ್ ಜಮೀನನ್ನು ಅಳತೆ ಮಾಡಿಸಿ, ಆಗ ಎಷ್ಟು ಅಕ್ರಮ ಜಮೀನುಯಿದೆ ಎಂಬುವುದು ಗೊತ್ತಾಗುತ್ತೆ" ಎನ್ನುವ ಹೇಳಿಕೆ ಗೆ ಮಂಗಳವಾರ ಬಿ.ಸಿ.ರೋಡ್‍ನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತನ್ನ ಜಮೀನಿನ ಬಗ್ಗೆ ಎಲ್ಲ ದಾಖಲೆಗಳಿವೆ. ಅಲ್ಲದೆ ತೆರಿಗೆಯನ್ನು ಕೂಡಾ ಪಾವತಿಸುತ್ತಿದ್ದು, ಆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇನೆ. ಸರಕಾರಿ ಹುದ್ದೆಯಲ್ಲಿರದ ತಾನು ಹೇಗೆ? ಅಕ್ರಮ ಆಸ್ತಿಯನ್ನು ಗಳಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಬೆಳವಣಿಗೆಯಲ್ಲಿ ಹತಾಶರಾಗಿರುವ ರೈ ಅವರು ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಅವರು ತನ್ನ ಮೇಲೆ ಅಪಪ್ರಚಾರ ಮಾಡುವುದನ್ನು ಬಿಟ್ಟು ತನಿಖೆ ನಡೆಸಲಿ. ಆಗ ಅವರ ಮಾತಿಗೆ ಗೌರವ ಬರುತ್ತದೆ ಎಂದ ರಾಜೆಶ್ ನಾಯಕ್, ಇತರರ ಅಕ್ರಮದ ಬಗ್ಗೆ ಮಾತನಾಡುವ ಉಸ್ತುವಾರಿ ಸಚಿವರು, ತನ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಜವಾಬ್ದಾರಿ ಸ್ಥಾನದಲ್ಲಿರುವವರು ಅಕ್ರಮ ಗಣಿಗಾರಿಕೆ, ಮರಳುದಂಧೆ ತೊಡಗಿಸಿಕೊಂಡಿದ್ದು, ಇದರ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಸದಸ್ಯ ದೇವದಾಸ್ ಶೆಟ್ಟಿ ಮಾತನಾಡಿ, ಈ ಹಿಂದೆ ಜಲೀಲ್ ಕರೋಪಾಡಿ ಹತ್ಯೆಯಲ್ಲಿ ರಾಜೇಶ್ ನಾಯಕ್ ಅವರ ಕೈವಾಡಯಿದೆ ಎಂದು ಸಚಿವರು ಆರೋಪ ಮಾಡುವ ಮೂಲಕ ರಾಜಕೀಯ ಬೆಳವಣಿಗೆಗೆ ಅಡ್ಡಗಾಲು ಹಾಕಿದ್ದರು. ಈ ರೀತಿಯ ತೆಜೋವಧೆ ಅವರ ಘನತೆಗೆ ಶೋಭೆಯಲ್ಲ ಎಂದು ಹೇಳಿದರು. 

ಸಚಿವರು ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದಲ್ಲಿ ನಿಯಮ ಮೀರಿ ಕಟ್ಟಡ ರಚಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ಈ ಬಗ್ಗೆ ಲೋಕಾಯುಕ್ತರಿಗೂ ದೂರನ್ನು ನೀಡಲಾಗಿದೆ ಎಂದ ಅವರು, ಬಂಟ್ವಾಳ ಕ್ಷೇತ್ರದಲ್ಲಿ ರಾಜೇಶ್ ನಾಯಕ್ ಅವರು ಪ್ರಗತಿಪರ ಕೃಷಿಕರಾಗಿ ಎಲ್ಲ ಕ್ಷೇತ್ರದಲ್ಲಿ ಜನಪ್ರೀಯತೆಯನ್ನು ಸಹಿಸಲು ಸಾಧ್ಯವಾಗದ ಸಚಿವರು ಅಸೂಯೆ ಪಡುತ್ತಿರುವುದು ಅವರ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುವುದನ್ನು ತೋರಿಸುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಮದಾಶ್ ಬಂಟ್ವಾಳ, ಮೋನಪ್ಪ ದೇವಸ್ಯ, ಸಿತಾರಾಂ ಪೂಜಾರಿ, ರಾಜಾರಾಂ ನಾಯಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News