ಬಂಟ್ವಾಳ : ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಧರಣಿ
ಬಂಟ್ವಾಳ, ಜ. 2: ಹಿಂದೂ ಜಾಗರಣಾ ವೇದಿಕೆ ಅಮ್ಟಾಡಿ ವಲಯ ಮತ್ತು ಹಿಂದೂ ಜಾಗರಣಾ ವೇದಿಕೆ ಮಹಿಳಾ ಘಟಕ ಅಮ್ಟಾಡಿ ಇವರ ನೇತೃತ್ವದಲ್ಲಿ, ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಒಂದು ವಾರಗಳ ಕಾಲ ನಡೆಯುವ ಧರಣಿಗೆ ಮಂಗಳವಾರ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿದರು.
ಈ ಸಂದರ್ಭ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಸುಲೋಚನಾ ಜಿ.ಕೆ ಭಟ್,ವಿಹಿಂಪ ಮುಖಂಡ ಅಶೋಕ ಶೆಟ್ಟಿ ಸರಪಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಮುಖರಾದ ರವಿರಾಜ್ ಬಿ.ಸಿ.ರೋಡ್, ಚಂದ್ರಕುಮಾರ್, ಅರುಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ, ರಾಮ್ ದಾಸ್ ಬಂಟ್ವಾಳ, ವಿಠಲ, ಮಚ್ಚೇಂದ್ರ ಸಾಲಿಯಾನ್, ಬಾಲಕೃಷ್ಣ ಕಲಾಯಿ, ಗುರುರಾಜ್ ಬಂಟ್ವಾಳ, ಶೇಖರ ಶೆಟ್ಟಿ, ಬಬಿತಾ ಕೋಟ್ಯಾನ್, ಸತೀಶ್ ಶೆಟ್ಟಿ, ಜಗದೀಶ್ ಕಾಮಾಜೆ, ದೇವದಾಸ ಶೆಟ್ಟಿ, ಹರೀಶ್ ಶೆಟ್ಟಿ ಪಡು, ಹರೀಶ್ ಕಲಾಯಿ ಮತ್ತಿತತರು ಉಪಸ್ಥಿತರಿದ್ದರು.